BECIL ನೇಮಕಾತಿ 2022 Saaksha Tv
BECIL: ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ ಇನ್ವೆಸ್ಟಿಗೇಟರ್ ಮತ್ತು ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ (BECIL) ಇನ್ವೆಸ್ಟಿಗೇಟರ್- 350 ಮತ್ತು ಸೂಪರ್ವೈಸರ್- 150 ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್ಸೈಟ್ https://www.becil.com ಗೆ ಭೇಟಿ ನೀಬೇಕು.
ವಿದ್ಯಾರ್ಹತೆ ಯಾವುದೇ ಪದವಿ ಜೊತೆಗೆ, ಕಂಪ್ಯೂಟರ್ ಜ್ಞಾನ ಇರಬೇಕು. ಈ ಹುದ್ದೆಗಳ ನೇಮಕ ಪ್ರಕ್ರಿಯೆಯ ಲಿಕಿತ ಪರೀಕ್ಷೆ ಮತ್ತು ಸಂದರ್ಶನ ಕುರಿತು ಮುಂದಿನ ದಿನಗಳಲ್ಲಿ ವೆಬ್ಸೈಟ್ www.becil.com ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಅಭ್ಯರ್ಥಿಗಳು ಅಪ್ಲಿಕೇಶನ್ ಅನ್ನು ಇಮೇಲ್ projecthr@becil.com ಗೆ ಕಳುಹಿಸಬೇಕು.
ಇನ್ವೆಸ್ಟಿಗೇಟರ್ ಗೆ 24,000 ಮತ್ತು ಸೂಪರ್ವೈಸರ್ ಗೆ 30,000 ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ಲಿಖಿತ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರಿಜಿಸ್ಟ್ರೇಷನ್ ಅಥವಾ ಪ್ರೊಸೆಸಿಂಗ್ ಶುಲ್ಕ ಸಾಮಾನ್ಯ: 500 ರೂ, ಒಬಿಸಿ: 500 ರೂ, ಎಸಿ/ಎಸ್ ಟಿ:350 ರೂ, ಮಾಜಿ ಸೈನಿಕ: 500ರೂ. ಅರ್ಜಿಸಲ್ಲಿಸಲು ಕೊನೆಯ ದಿನಾಂಕ 25-1-2022. ಉದ್ಯೋಗ ವಿಧ ಗುತ್ತಿಗೆ. ಉದ್ಯೋಗ ಕ್ಷೇತ್ರ ಸರಕಾರಿ ಉದ್ಯೋಗ.








