ಬೆಂಗಳೂರು : ಈ ಹಿಂದೆ ನಿಖಿಲ್ ಎಲ್ಲಿದ್ದೀಯಾಪ್ಪ ಎಂದು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇದೀಗ ನೆಟ್ಟಿಗರಿಗೆ ಆಹಾರವಾಗಿದ್ದಾರೆ.
ಇತ್ತೀಚೆಗೆ ಡ್ರಗ್ಸ್, ಕ್ಯಾಸಿನೋ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿ ‘ನಾನು 1982ರಲ್ಲೇ ಕ್ಯಾಸಿನೋ ನೋಡಿದ್ದೇನೆ. ನನ್ನ ಧರ್ಮಪತ್ನಿ ಮತ್ತು ನಾನು ಮಲೇಷಿಯಾಗೆ ಟೂರ್ ಹೋಗಿದ್ದೆವು.
ಆ ವೇಳೆ ಅಲ್ಲಿನ ಗೈಡ್ ಕರೆದುಕೊಂಡು ಹೋಗಿದ್ದರು. ಅಲ್ಲಿ ಡ್ರಗ್ಸ್ ಇರಲಿಲ್ಲ’ ಎಂದು ಹೇಳಿಕೆ ನೀಡಿದ್ದರು.
ಕುಮಾರಸ್ವಾಮಿ ಅವರ ಈ ಹೇಳಿಕೆ ಈಗ ಭಾರಿ ಟ್ರೋಲ್ ಆಗುತ್ತಿದೆ. ಯಾಕೆಂದರೇ ಗೂಗಲ್ ವಿಕಿಪಿಡಿಯಾ ಪ್ರಕಾರ, ಕುಮಾರಸ್ವಾಮಿ ಅವರು ಮೊದಲ ಹೆಂಡತಿ ಅನಿತಾ ಕುಮಾರಸ್ವಾಮಿ ಅವರ ಜತೆ ಮದುವೆಯಾಗಿದ್ದು 1986ರಲ್ಲಿ..
ಎರಡನೆಯ ಹೆಂಡತಿ ರಾಧಿಕಾ ಅವರ ಜತೆ ಮದುವೆಯಾಗಿದ್ದು 2006 ಎಂದು ಇದೆ.
ಹೀಗಿರುವಾಗ 1982ರಲ್ಲಿ ಧರ್ಮಪತ್ನಿ ಜತೆ ನಾನು ಮಲೇಷಿಯಾದ ಕ್ಯಾಸಿನೋಗೆ ಹೋಗಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದು ಹೇಗೆ..? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಅಲ್ಲದೆ ನಿಮ್ಗೆ ಮದ್ವೆಯಾಗಿದ್ದು 1986ರಲ್ಲಿ, 1982ರಲ್ಲೇ ಪತ್ನಿ ಜತೆ ಕ್ಯಾಸಿನೋಗೆ ಹೇಗೋದ್ರಿ ಕುಮಾರಣ್ಣ..? ಎಂದು ವಿಧವಿಧವಾಗಿ ಕಮೆಂಟ್ ಗಳನ್ನು ಮಾಡುತ್ತ ಟ್ರೋಲ್ ಮಾಡುತ್ತಿದ್ದಾರೆ.








