ಮಂಗಳೂರಿನಿಂದ ಪುತ್ತೂರಿಗೆ ಆಗಮಿಸಿದ ಕೆಎಸ್ ಆರ್ ಟಿಸಿ ಬಸ್ ನಲ್ಲಿದ್ದ ತರಕಾರಿ ಪಾರ್ಸೆಲ್ ನಲ್ಲಿ ದನದ ಮಾಂಸ ಪತ್ತೆಯಾಗಿದೆ. ಬಸ್ ನಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಇದ್ದ ಹಿಂದೂ ಪರ ಸಂಘಟನೆಗಳು ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರ ನೆರವಿನೊಂದಿಗೆ ತಪಾಸಣೆ ನಡೆಸಿದ್ದಾರೆ. ಈ ವೇಳೆ ತರಕಾರಿ ಪಾರ್ಸೆಲ್ ನಲ್ಲಿ ಸುಮಾರು 5 ಕೆ.ಜಿ ದನದ ಮಾಂಸ ಪತ್ತೆಯಾಗಿದೆ.
ಇನ್ನು ಈ ವಿಚಾರವಾಗಿ ಬಸ್ ನ ನಿರ್ವಾಹಕರನ್ನು ವಿಚಾರಿಸಿದಾಗ, ಪಾರ್ಸೆಲ್ ಹೇಗೆ ಬಸ್ಸಿನೊಳಗೆ ಬಂತೋ ಗೊತ್ತಿಲ್ಲ ಎಂದಿದ್ದಾರೆ. ಆದ್ರೆ ಪಾರ್ಸೆಲ್ಗೆ ಸಂಬಂಧಿಸಿ ನಿರ್ವಾಹಕ ಶಾಂತಪ್ಪ ಜವಾಬ್ದಾರರಾಗಿರುವುದರಿಂದ ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.