ನಕಲಿ ವಾಲ್ ಕೇರ್ ಪುಟ್ಟಿ ತಯಾರಿಸ್ತಿದ್ದ ಫ್ಯಾಕ್ಟರಿ ಮೇಲೆ ಸಿಸಿಬಿ ದಾಳಿ ನಡೆಸಿದೆ.
ಬಿರ್ಲಾ ಕಂಪನಿಯ ವಾಲ್ ಕೇರ್ ಹೆಸರಲ್ಲಿ ನಡೆಯುತ್ತಿದ್ದ ಪ್ಯಾಕ್ಟರಿ ಇದಾಗಿದೆ.
ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿದ್ದ ಫ್ಯಾಕ್ಟರಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ..
ಆರೋಪಿಗಳು ವೈಟ್ ವಾಲ್ ಕೇರ್ ಪುಟ್ಟಿಯನ್ನ ನಕಲಿಯಾಗಿ ತಯಾರು ಮಾಡುತ್ತಿದ್ದರು..
ದಾಳಿ ವೇಳೆ 105 ಪ್ಯಾಕೇಟ್ ನಕಲಿ ವಾಲ್ ಕೇರ್ ಪಟ್ಟಿ, ತಯಾರಿಕಾ ಯಂತ್ರ ವಶಕ್ಕೆ ಪಡೆಯಲಾಗಿದೆ.
ಬಿರ್ಲಾ ಕಂಪನಿಯ ಹೆಸರಲ್ಲಿ ಸಾರ್ವಜನಿಕರಿಗೆ ಈ ಆರೋಪಿಗಳು ವಂಚಿಸುತ್ತಿದ್ದರು..
ಈ ಸಂಬಂಧ ಒಬ್ಬ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.