ನೈಟ್ರೊಸಮೈನ್ ಎಂಬ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕ ಸಂಯುಕ್ತಗಳು ಬಿಯರ್ ಮತ್ತು ಮಾಂಸದಲ್ಲಿ ಪತ್ತೆಯಾಗಿದ್ದು, ಇದು ಸೇವನೆ ಮಾಡುವವರ ಆರೋಗ್ಯ ಮೇಲೆ ಪರಿಣಾಮ ಬೀರಬಹುದು ಎಂದು ಯುರೋಪಿಯನ್ ಫುಡ್ ಸೇಫ್ಟಿ ಏಜೆನ್ಸಿ ಎಚ್ಚರಿಕೆ ನೀಡಿದೆ.
ನೈಟ್ರೊಸಮೈನ್ ಉದ್ದೇಶಪೂರ್ವಕವಾಗಿ ಆಹಾರಕ್ಕೆ ಸೇರಿಸಿಲ್ಲವಾದರೂ ಅದರ ತಯಾರಿಕೆ ಮತ್ತು ಸಂಸ್ಕರಣೆಯ ಸಮಯದಲ್ಲಿ ರೂಪುಗೊಂಡಿರಬಹುದು ಎಂದು ಹೇಳಲಾಗುತ್ತಿದೆ. ಕಾರ್ಸಿನೋಜೆನಿಕ್ ಹಾಗೂ ಜಿನೋಟಾಕ್ಸಿಕ್ ಗಳ ಸಂಯೋಜನೆ ಡಿಎನ್ ಎಗೆ ಹಾನಿಯುಂಟು ಮಾಡಬಹುದು ಎಂದು ಯುರೋಪಿಯನ್ ಯೂನಿಯನ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ.
ಈ ಕುರಿತು ಮಾತನಾಡಿರುವ ಇಎಫ್ ಎಸ್ ನ ಸಮಿತಿಯ ಅಧ್ಯಕ್ಷ ಡೈಟರ್ ಶ್ರೆಂಕ್, ನಮ್ಮ ಮೌಲ್ಯಮಾಪನವು ಯುರೋಪಿನ ಎಲ್ಲಾ ವಯೋಮಾನದವರಿಗೆ, ಆಹಾರದಲ್ಲಿ ನೈಟ್ರೊಸಮೈನ್ ಗಳಿಗೆ ಒಡ್ಡಿಕೊಳ್ಳುವ ಮಟ್ಟವು ಆರೋಗ್ಯದ ಕಾಳಝಯನ್ನು ಹೆಚ್ಚಿಸುತ್ತದೆ ಎಂದು ತೀರ್ಮಾನಿಸುತ್ತದೆ ಎಂದು ಹೇಳಿದ್ದಾರೆ.
ಸಂಸ್ಕರಿಸಿದ ಮಾಂಸ, ಸಂಸ್ಕರಿಸಿದ ಮೀನು, ಕೋಕೋ, ಬಿಯರ್ ಮತ್ತು ಇತರ ಆಲ್ಕೋಹಾಲ್ ಯುಕ್ತ ಪಾನೀಯಗಳು ಸೇರಿದಂತೆ ಆಹಾರಗಳಲ್ಲಿ ನೈಟ್ರೋಸಮೈನ್ ಗಲು ಪತ್ತೆಯಾಗಿವೆ ಎಂದು ಇಎಫ್ ಎಸ್ ಎ ತನ್ನ ವರದಿಯಲ್ಲಿ ತಿಳಿಸಿದೆ. ನೈಟ್ರೋಸಮೈನ್ ಗಳ ಸೇನೆ ಕಡಿಮೆ ಮಾಡಲು ವಿವಿಧ ರೀತಿಯ ಆಹಾರಗಳೊಂದಿಗೆ ಸಮತೋಲಿತ ಆಹಾರ ಸ್ವೀಕರಿಸಲು ಸಲಹೆ ನೀಡಲಾಗಿದೆ.








