Belgaum ಬೆಳಗಾವಿಯಲ್ಲಿ ಸಾರಿಗೆ ನೌಕರರಿಂದ ಭಿಕ್ಷಾಟನೆ
ಬೆಳಗಾವಿ : ಗಡಿನಾಡು ಬೆಳಗಾವಿಯಲ್ಲಿ ಸಾರಿಗೆ ನೌಕಕರ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದೆ.
ಮಾರ್ಚ್ ತಿಂಗಳ ಸಂಬಳವನ್ನ ನೀಡದಿರುವ ಹಿನ್ನೆಲೆ ಯುಗಾದಿ ಹಬ್ಬದಿನದಂದು ಭಿಕ್ಷಾಟನೆ ಮಾಡುವ ಮೂಲಕ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಬೆಳಗಾವಿ ಪ್ರವಾಸಿ ಮಂದಿರ ಬಳಿ ಸಾರಿಗೆ ನೌಕರರ ಕುಟುಂಬಸ್ಥರು ಕೈಯಲ್ಲಿ ತಟ್ಟೆ, ಬುಟ್ಟಿ ಹಿಡಿದು ಭಿಕ್ಷಾಟನೆ ಮಾಡುತ್ತಿದ್ದಾರೆ.
ನಾವೇನೂ ಪಾಕಿಸ್ತಾನದಿಂದ ಬಂದಿದ್ವಾ. 1 ಲಕ್ಷ 30 ಸಾವಿರ ಜನ ಇವತ್ತು ಉಪವಾಸ ಇದ್ದೇವೆ.
ಮಾರ್ಚ್ ತಿಂಗಳ ಸಂಬಳವನ್ನೆ ನೀಡಿಲ್ಲ ಮಗನ ಹಾರ್ಟ್ ಆಪರೇಷನ್ ಮಾಡ್ಸಿವಿ, ಸಾಲ ಕಟ್ಟತ್ತಿದ್ದೇವೆ.
ಈಗಿರುವ ಸಂಬಳದಲ್ಲಿ ಜೀವ ಸಾಗಿಸುವುದು ಕಷ್ಟಕರವಾಗಿದೆ. ಜೀವ ಕೊಡ್ತಿವಿ ಆದ್ರೆ 6 ನೇ ವೇತನ ಸಿಗುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಬೆಳಗಾವಿಯಲ್ಲಿ ಮುಷ್ಕರದ ನಡುವೆ ಬಸ್ ಸಾರಿಗೆ ಸಂಚಾರ ಆರಂಭವಾಗಿದ್ದು, ಬಸ್ ತಡೆದು ನೌಕರರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.










