ಉಡುಪಿ : ನಾಳೆಯಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ ಆರಂಭವಾಗಲಿವೆ. ಆದ್ರೆ ಅನ್ನ ದಾಸೋಹ ಮತ್ತು ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇಗುಲದಲ್ಲಿ ಎಲ್ಲಾ ಸೇವೆ ಆರಂಭಿಸಲು ಅನುಮತಿ ಕೋರಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಸೆಪ್ಟೆಂಬರ್ 1ರಿಂದ ಸೇವೆ ಆರಂಭ ಮಾಡಬೇಕು ಎಂಬುದು ನಮ್ಮ ಗುರಿ. ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇವೆ. ಒಳಾಂಗಣದ ಎಲ್ಲಾ ಸೇವೆ ಆರಂಭ ಮಾಡಿ ಎಂದು ಮನವಿ ಮಾಡಿದ್ದೇವೆ. ಸರ್ಕಾರದಿಂದ ಅಧಿಕೃತ ಮಾಹಿತಿ ಮತ್ತು ಅನುಮತಿ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊರೊನಾ ಗೈಡ್ ಲೈನ್ ಮೇಲೆ ಎಲ್ಲಾ ಸೇವೆ ಆರಂಭವಾಗುತ್ತದೆ. ಕೊಲ್ಲೂರಿನ ಚಿನ್ನದ ರಥ ಸೇವೆ, ಬೆಳ್ಳಿರಥ ಸೇವೆ ಹೇಗೆ ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ. ನೂರಾರು, ಸಾವಿರಾರು ಜನ ಸೇರಿ ಕೊಡುವ ಸೇವೆ ಸದ್ಯಕ್ಕೆ ಸಾಧ್ಯವಿಲ್ಲ. ಅಂತಹ ಸೇವೆಯನ್ನು ಹತ್ತು-ಹದಿನೈದು ಜನರು ಮಾಡಲು ಸಾಧ್ಯವೇ ಎಂಬ ಚಿಂತನೆ ನಡೆಸುತ್ತೇವೆ. ಕೋವಿಡ್ ನಿಯಮದ ಮಿತಿಯ ಒಳಗೆ ಎಲ್ಲಾ ಸೇವೆಗಳು ಇರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಶ್ರೀ ಅನ್ನಪೂರ್ಣೆಶ್ವರಿ ಜ್ಯೋತಿಷ್ಯ ಪೀಠಂ
ಶ್ರೀ ಮಹಾ ಕಾಲ ಭೈರವ
ದೈವಜ್ಞ ಪಂಡಿತ್ ಗಜೇಂದ್ರ ಅವಧಾನಿಗಳು
ವಿಳಾಸ – ಡಿವಿಜಿ ರೋಡ್, ಬಸವನಗುಡಿ ಬೆಂಗಳೂರು
ಸರ್ವ ಸಮಸ್ಯೆಗಳಿಗೆ ಗುರುಗಳನ್ನು ಒಮ್ಮೆ ಭೇಟಿ ಕೊಡಿ
ಸಂಪರ್ಕಿಸಿ – 9538175275








