ಕೊರೊನಾ ವೈರಸ್ನಿಂದಾಗಿ ಸ್ಥಗಿತಗೊಂಡ ಕ್ರಿಕೆಟ್ ಚಟುವಟಿಕೆಗಳ ಮಧ್ಯೆ 18 ಬೌಲರ್ಗಳು ತರಬೇತಿಗೆ ಮರಳಿದ ವಿಶ್ವದ ಮೊದಲ ಪ್ರಮುಖ ಕ್ರಿಕೆಟ್ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ.
18 ಇಂಗ್ಲೆಂಡ್ ಬೌಲರ್ಗಳು ವೈಯಕ್ತಿಕ ತರಬೇತಿಗೆ ಮರಳಿದ್ದಾರೆ. ಜುಲೈ 8 ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ಇಂಗ್ಲೆಂಡ್ ಸುಮಾರು ಏಳು ವಾರಗಳನ್ನು ಉಳಿದಿವೆ.
ತಲಾ ಮೂರು ದಿನಗಳ ವಿರಾಮದ ಬಳಿಕ ಅಭ್ಯಾಸ ಪಂದ್ಯ ನಡೆಯಲಿದೆ. ಈ ಸಂದರ್ಭಗಳಲ್ಲಿ ತನ್ನ ವೇಗದ ಬೌಲರ್ಗಳನ್ನು ಬದಲಿಸಿ ಮೈದನಾಕ್ಕೆ ಇಳಿಸಲಿವೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿದೆ.
ಇಂಗ್ಲೆಂಡ್ನ ಪ್ರಮುಖ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಟ್ರೆಂಟ್ ಬ್ರಿಡ್ಜ್ ನಲ್ಲಿ ಎರಡು ಬಾರಿ ತರಬೇತಿ ನಡೆಸಿದ್ದಾರೆ. ಅವರು ಗುರುವಾರ ಸ್ಟಂಪ್ನಲ್ಲಿ ಐದು ಓವರ್ಗಳನ್ನು ಮತ್ತು ಶುಕ್ರವಾರ ಆರು ಓವರ್ಗಳನ್ನು ಎಸೆದರು.