BEL Senior Engineer Recruitment 2025 : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಅಗತ್ಯವಿರುವ ಸೀನಿಯರ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ : ಸೀನಿಯರ್ ಇಂಜಿನಿಯರ್ (ಫಿಸಿಕಲ್ ಡಿಸೈನ್ ಇಂಜಿನಿಯರ್), ಸೀನಿಯರ್ ಇಂಜಿನಿಯರ್.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 14 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ ಹುದ್ದೆಗಳ ಸಂಖ್ಯೆ
ಸೀನಿಯರ್ ಇಂಜಿನಿಯರ್ (ಫಿಸಿಕಲ್ ಡಿಸೈನ್ ಇಂಜಿನಿಯರ್) 2
ಸೀನಿಯರ್ ಇಂಜಿನಿಯರ್ 12
ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
• ಸೀನಿಯರ್ ಇಂಜಿನಿಯರ್ (ಫಿಸಿಕಲ್ ಡಿಸೈನ್ ಇಂಜಿನಿಯರ್) – ಎಂ.ಇ/ ಎಂ.ಟೆಕ್ ಇನ್ ವಿ.ಎಲ್.ಎಸ್.ಐ ಡಿಸೈನ್/ ಮೈಕ್ರೋಇಲೆಕ್ಟ್ರಾನಿಕ್ಸ್.
• ಸೀನಿಯರ್ ಇಂಜಿನಿಯರ್ – ಬಿ.ಇ/ ಬಿ.ಟೆಕ್ ಇನ್ ಇಲೆಕ್ಟ್ರಾನಿಕ್ಸ್ / ಮೆಕ್ಯಾನಿಕಲ್ ಇಂಜಿನಿಯರಿಂಗ್.
ವಯೋಮಾನ : ದಿನಾಂಕ 01/04/2025ಕ್ಕೆ ಅಭ್ಯರ್ಥಿಗಳು ಗರಿಷ್ಠ 32 ವರ್ಷ ವಯೋಮಾನ ಮೀರಿರಬಾರದು.
ವಯೋಮಿತಿ ಸಡಿಲಿಕೆ :
• ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷ
• ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ – 05 ವರ್ಷ
• ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷ
ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 50,000 ರಿಂದ ರೂ. 1,60,000 ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ : ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಅನುಭವ : ಅಭ್ಯರ್ಥಿಗಳು ಕನಿಷ್ಠ 2 ರಿಂದ 4 ವರ್ಷಗಳ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : Deputy General Manager (HR), Product Development & Innovation Centre (PDIC), Bharat Electronics Limited, Prof. U R Rao Road, Near Nagaland Circle, Jalahalli Post, Bengaluru – 560013, India.
ನಿಗದಿತ ಅರ್ಜಿ ಶುಲ್ಕದ ವಿವರ :
• ಎಸ್ಸಿ, ಎಸ್ಟಿ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
• ಉಳಿದ ಅಭ್ಯರ್ಥಿಗಳಿಗೆ – ರೂ. 600
ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಥವಾ ಚಲನ್ ಪ್ರಿಂಟ್ ತೆಗೆದು ಯಾವುದೇ ಎಸ್.ಬಿ.ಐ ಬ್ಯಾಂಕಿನ ಶಾಖೆಯಲ್ಲಿ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಏಪ್ರಿಲ್ 28, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಮೇ 19, 2025








