ಮೋದಿಯ ಒಳ್ಳೆ ಕೆಲಸಗಳಿಂದ ಜನ ನನಗೆ ಮತ ನೀಡ್ತಾರೆ : ಮಂಗಳಾ ಅಂಗಡಿ
ಬೆಳಗಾವಿ : ಸುರೇಶ್ ಅಂಗಡಿಯವರ ಅಭಿವೃದ್ಧಿ ಕಾರ್ಯಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಒಳ್ಳೆಯ ಆಡಳಿತ ನೋಡಿ ಜನರು ನನಗೆ ಮತ ನೀಡುತ್ತಾರೆ ಎಂದು ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್ ನ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಚಾದರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಮ್ಮ ಇಬ್ಬರು ಹೆಣ್ಣು ಮಕ್ಕಳು ಕೂಡ ಪ್ರಚಾರದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು.
ಇನ್ನು ಜಿಲ್ಲೆಯಲ್ಲಿ ಸಂಸದರಾಗಿ ಸುರೇಶ್ ಅಂಗಡಿ ತುಂಬಾ ಕೆಲಸ ಮಾಡಿದ್ದಾರೆ. ಅವರ ಜನಪರ ಕಾರ್ಯಗಳವೇ ನನ್ನ ಕೈ ಹಿಡಿಯಲಿದೆ ಎಂದರು.