ಬೆಳಗಾವಿಯಲ್ಲಿ ಬಿಜೆಪಿ ಜಸ್ಟ್ ಪಾಸ್ : ಸೋತರೂ ಗೆದ್ದ ಸತೀಶ್ ಜಾರಕಿಹೊಳಿ

1 min read
Belagavi

ಬೆಳಗಾವಿಯಲ್ಲಿ ಬಿಜೆಪಿ ಜಸ್ಟ್ ಪಾಸ್ : ಸೋತರೂ ಗೆದ್ದ ಸತೀಶ್ ಜಾರಕಿಹೊಳಿ

ಬೆಂಗಳೂರು : ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಮಂಗಳ ಅಂಗಡಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವಿರುದ್ಧ ಮಂಗಳ ಅವರು 4 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಆರಂಭದಿಂದಲೂ ಹಾವು ಏಣಿಯ ಆಟದಂತೆ ನಡೆದ ಈ ದಂಗಲ್ ನಲ್ಲಿ ವಿಜಯ ಲಕ್ಷ್ಮಿ ಕ್ಷಣಕ್ಷಣಕ್ಕೂ ಜಾಗ ಬದಲಿಸುತ್ತಲೇ ಇದ್ದಳು. ಒಂಡೇ ಮ್ಯಾಚ್ ನಂತೆ ಆರಂಭವಾಗ ಪೈಪೋಟಿ ಟಿ 20 ಗೆ ಕೊನೆಗೆ ಸೂಪರ್ ಓವರ್ ನಲ್ಲಿ ಅಂತ್ಯಕಂಡಿತು.

ಬಿಜೆಪಿ ಜಸ್ಟ್ ಪಾಸ್

ಹೌದು..! ಬೆಳಗಾವಿಯಲ್ಲಿ ಬಿಜೆಪಿ ಜಯ ಸಾಧಿಸರಬಹುದು. ಆದ್ರೆ ಇದು ನೆಮ್ಮದಿಯ ಗೆಲುವಲ್ಲ. ಯಾಕೆಂದ್ರೆ ಬಿಜೆಪಿ ಹಲವು ಸುತ್ತುಗಳ ಮತ ಎಣಿಕೆಯಲ್ಲಿ ಸೋಲುಂಡಿದೆ. ಸುಮಾರು 3 ರಿಂದ 4 ಗಂಟೆಗಳ ಕಾಲ ಕಾಂಗ್ರೆಸ್ ಲೀಡ್ ನಲ್ಲಿತ್ತು. ಇನ್ನೇನು ಗೆಲುವು ಕೈ ತಪ್ಪಿ ಹೋಯ್ತು ಅಂದುಕೊಳ್ಳುವಷ್ಟರಲ್ಲಿ ಬಿಜೆಪಿಗೆ ಜಯ ಸಿಕ್ಕಿದೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಬೆಳಗಾವಿಯಲ್ಲಿ ಬಿಜೆಪಿ ಜಸ್ಟ್ ಪಾಸ್ ಆಗಿದೆ.

Belagavi

ಸೋತರೂ ಗೆದ್ದ ಸತೀಶ್ ಜಾರಕಿಹೊಳಿ

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಕೇವಲ ನಾಲ್ಕು ಸಾವಿರದ ಮತಗಳ ಅಂತರದಿಂದ ಮಾತ್ರ ಸೋಲುಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಈ ಸೋಲು ಸೋಲೇ ಅಲ್ಲ. ಮುಖ್ಯವಾಗಿ ಬೆಳಗಾವಿ ಬಿಜೆಪಿಯ ಭದ್ರಕೋಟೆಯಾಗಿತ್ತು. ಇಡೀ ಸರ್ಕಾರವೇ ಸತೀಶ್ ಜಾರಕಿಹೊಳಿ ವಿರುದ್ಧ ಪ್ರಚಾರ ಮಾಡಿದ್ದರು. ಸ್ವತಃ ಸಹೋದರರೇ ಸತೀಶ್ ವಿರುದ್ಧವಾಗಿ ನಿಂತಿದ್ದರು. ಆದ್ರೂ ಎದೆಗುಂದದೆ ಚುನಾವಣೆ ಎದುರಿಸಿದ ಸತೀಶ್ ಜಾರಕಿಹೊಳಿ ಬಿಜೆಪಿಗೆ ಒಂದು ಹಂತದಲ್ಲಿ ಸೋಲಿನ ಭೀತಿಯನ್ನ ಹುಟ್ಟಿಸಿದ್ದರು. ಕೊನೆಯಲ್ಲಿ ಸೋತರೂ ಅಂತಿಮ ಹಂತದವರೆಗೂ ಸೋಲೊಪ್ಪಿಕೊಳ್ಳದೇ ಎದುರಾಳಿಗೆ ಭಯ ಹುಟ್ಟಿಸಿದ್ದರು.

ಒಟ್ಟಾರೆ ಬೆಳಗಾವಿಯಲ್ಲಿ ಕಳೆದ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿಕೊಂಡರೇ ಈಗಿನ ಫಲಿತಾಂಶ ಬಿಜೆಪಿಗಿಂತ ಕಾಂಗ್ರೆಸ್ ಗೆ ಹೆಚ್ಚಿನ ಖುಷಿ ತಂದೊಡ್ಡಿದೆ ಅನ್ನೋದು ತಜ್ಞರ ಮಾತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd