ಬೆಳಗಾವಿ ಮಾರುಕಟ್ಟೆಯಲ್ಲಿ ಜನವೋ ಜನ Belagavi
ಬೆಳಗಾವಿ : ಮೂರು ದಿನಗಳ ಸಂಪೂರ್ಣ ಲಾಕಡೌನ್ ಬಳಿಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ಜನ ಜಾತ್ರೆ ನಡೆದಿದೆ.
ಅಗತ್ಯ ವಸ್ತುಗಳ ಖರೀದಿಗೆ ಕುಂದಾನಗರಿ ಬೆಳಗಾವಿ ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದಿದ್ದಾರೆ.
ನಗರದ ಗಣಪತಿ ಬೀದಿ, ಕಿರ್ಲೋಸ್ಕರ ರಸ್ತೆ, ಕಂಬಳಿ ಕೂಟದಲ್ಲಿ ಕೊರೊನಾವನ್ನು ಮರೆತು ಜನರು ಅಗತ್ಯವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾರೆ.
ಮಾಸ್ಕ್ ಧರಿಸಿದ್ರು ಜನರು ಮಾತ್ರ ಸಾಮಾಜಿಕ ಅಂತರವಿಲ್ಲದೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿದ್ದರು.