ಜಾತ್ರೆಯಲ್ಲಿ ಯುವಕ ಕೈ ಹಿಡಿದು ಎಳೆದಾಡಿದ್ದಕ್ಕೆ ಯವತಿ ಆತ್ಮಹತ್ಯೆ…
ಜಾತ್ರೆಯಲ್ಲಿ ಯುವಕನೋರ್ವ ಕೈಹಿಡಿದು ಎಳೆದಾಡಿದ್ದಕ್ಕೆ ಮನನೊಂದ ಯುವತಿ ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಸ್ವಪ್ನಾ ಸುಭಾಷ ಹಿಪ್ಪರಗಿ (19) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದೇ ಗ್ರಾಮದ ಸುನೀಲ ಅಣ್ಣಪ್ಪ ಧರಿಗೌಡರ ಆಕೆಯ ಕೈ ಹಿಡಿದು ಎಳೆದಾಡಿದ ಯುವಕ ಎಂದು ಪೋಷಕರು ದೂರು ದಾಖಲಿಸಿದ್ದಾರೆ.
ಸ್ವಪ್ನಳನ್ನ ಮದುವೆ ಮಾಡಿಕೊಡಿ ಎಂದು ಸುನೀಲ ಯುವತಿಯ ತಂದೆ ತಾಯಿಯನ್ನ ಈಚೇಗೆ ಕೇಳಿದ್ದನಂತೆ. ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ ಎಂದು ಸ್ವಪ್ನಾಳ ತಂದೆ ಸುಭಾಷ ಹೇಳಿದ್ದರು. ಅದೇ ಸಿಟ್ಟಿನಲ್ಲಿ ಜ.25 ರಂದು ಜಾತ್ರೆಯಲ್ಲಿ ಸುನೀಲ ಸ್ವಪ್ನಾಳ ಕೈ ಹಿಡಿದು ಎಳೆದಿದ್ದಾನೆ. ಇದರಿಂದ ಮನನೊಂದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Belagavi: girl committed suicide after being dragged by the hand of a young man in the fair.








