Belgaum | ಮದ್ಯದ ಮತ್ತಿನಲ್ಲಿ ಜಗಳ… ಮೂವರ ಮರಣದೊಂದಿಗೆ ಅಂತ್ಯ
ಬೆಳಗಾವಿ : ಕೌಟುಂಬಿಕ ಕಲಹ ಮೂವರ ಮರಣದೊಂದಿಗೆ ಅಂತ್ಯವಾಗಿರುವ ಘಟನೆ ಬೆಳಗಾವಿಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.
25 ವರ್ಷದ ಹೊಳೆಪ್ಪ ಮಾರುತಿ ಮಸ್ತಿ, 22 ವರ್ಷದ ವಾಸಂತಿ ಹಾಗೂ ಒಂದೂವರೆ ವರ್ಷದ ಮಗು ಮೃತ ದುರ್ದೈವಿಗಳಾಗಿದ್ದಾರೆ.
ಹೊಳೆಪ್ಪ ಮಾರುತಿ ಮಸ್ತಿ ಮದ್ಯದ ಅಮಲಿನಲ್ಲಿ ಪತ್ನಿ ವಾಸಂತಿ ಜೊತೆ ಜಗಳವಾಡಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುವ ಉದ್ದೇಶದಿಂದ ವಿಷ ಕುಡಿದಿದ್ದಾನೆ.
ಕೂಡಲೇ ಆತನನ್ನು ಸ್ನೇಹಿತರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಹೊಳೆಪ್ಪ ಮಾರುತಿ ಮಸ್ತಿ ಕೊನೆಯುಸಿರೆಳೆದಿದ್ದನು.
ಇದರಿಂದ ಮನನೊಂದ ಪತ್ನಿ ವಾಸಂತಿ ತನ್ನ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.