Belgaum | ಸಹಾಯ ಮಾಡುವ ನೆಪದಲ್ಲಿ ಜನರಿಗೆ ವಂಚನೆ
ಬೆಳಗಾವಿ : ಎಟಿಎಂನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಪಿನ್ ತಿಳಿದುಕೊಂಡು ಜನರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
33 ವರ್ಷದ ಅಮೂಲ ದಿಲೀಪ ಸಕಟೆ ಬಂಧಿತ ಆರೋಪಿಯಾಗಿದ್ದಾರೆ. ವಿಜಯಾ ರಾಣಪ್ಪ ಢಾಲೆ ಎಂಬ ಮಹಿಳೆಯ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರು ಬಂಧಿತನಿಂದ ೫೧ ಎಟಿಎಂ ಕಾರ್ಡ್ ವಶಕ್ಕೆ ಪಡೆಕೊಂಡಿದ್ದಾರೆ.
ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಎಟಿಎಂಗೆ ಬರೋರನ್ನೆ ಟಾರ್ಗೆಟ್ ಮಾಡಿದ್ದ ಅಮೂಲ್, ಹಣ ತೆಗೆಯಲು ಸಹಾಯ ಮಾಡುವುದಾಗಿ ಹೇಳಿ ಪಿನ್ ತಿಳಿದುಕೊಂಡು ಕಾರ್ಡ್ ಎಕ್ಸಚೇಂಜ್ ಮಾಡಿ ಮಕ್ಮಲ್ ಟೋಪಿ ಹಾಕುತ್ತಿದ್ದ.
೩/೯/೨೨ ರಂದು ವಿಜಯಾ ಅಕೌಂಟ್ ನಿಂದ ೨೭,೦೦೦ ಡ್ರಾ ಮಾಡಿದ್ದ. ತಕ್ಷಣ ಚಿಕ್ಕೋಡಿ ಪೊಲೀಸರಿಗೆ ವಿಜಯಾ ಢಾಲೆ ದೂರು ನೀಡಿದ್ದರು.
ದೂರು ಆಧರಿಸಿ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.