ಬೆಳಗಾವಿ ಜಿಲ್ಲೆ ವಿಭಜನೆ : ಸವದಿ ಹೇಳಿದ್ದೇನು.?
ಬಳ್ಳಾರಿ : ಬಳ್ಳಾರಿ ಜಿಲ್ಲೆ ವಿಭಜನೆ ಬೆನ್ನಲ್ಲೆ ಬೆಳಗಾವಿ ಜಿಲ್ಲೆ ವಿಭಜನೆ ವಿಷಯ ಮುನ್ನಲೆಗೆ ಬಂದಿದೆ. ಈ ವಿಚಾರವಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ದು, ಸದ್ಯ ಬಳ್ಳಾರಿ ಜಿಲ್ಲೆಯ ವಿಭಜನೆ ಆಗಿದೆ.
ವಿಜಯನಗರ ಜಿಲ್ಲೆ ರಚನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದ್ರೆ ಬೆಳಗಾವಿ ವಿಭಜನೆ ಆಗಲಿಕ್ಕೆ ತಾಂತ್ರಿಕ ತೊಂದರೆ ಇದೆ ಎಂದು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ವಿಭಜನೆಯ ನಂತರ ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ, ಉಸ್ತುವಾರಿ ಸಚಿವ ಆನಂದ್ ಸಿಂಗ್ ಮೊದಲ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಬಳ್ಳಾರಿ ಜಿಲ್ಲೆಯ ವಿಭಜನೆ ಆಗಿದೆ. ವಿಜಯನಗರ ಜಿಲ್ಲೆ ರಚನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ಬಳಿಕ ಗ್ರಾಮ ಪಂಚಾಯತ್ ಚುನಾವಣೆ ಬಗ್ಗೆ ಮಾತನಾಡಿ, ಹಳ್ಳಿಯಿಂದ ಡಿಲ್ಲಿಯವರೆಗೆ ಪಕ್ಷ ಗಟ್ಟಿಗೊಳಿಸಿದ್ದೇವೆ.
ಹಳ್ಳಿಯಿಂದ ದಿಲ್ಲಿಯವರೆಗೆ ಬಿಜೆಪಿ ಗಟ್ಟಿಯಿದೆ. ರಾಜ್ಯದಲ್ಲಿ 6 ತಂಡಗಳನ್ನು ಮಾಡಿದ್ದೇವೆ. ಎಲ್ಲಾ ಕಡೆ ಸಂಚಾರ ಮಾಡುತ್ತಿದ್ದೇವೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ. 80 ರಷ್ಟು ಜನ ಬಿಜೆಪಿಯಿಂದ ಆಯ್ಕೆಯಾಗಬೇಕು. ಕದ್ರಿ ಬೆಟ್ಟ ಗುಡ್ಡೆಯಲ್ಲಿ `ಲಷ್ಕರ್ ಜಿಂದಾಬಾದ್’ ಬರಹ
ಫಲಾನುಭವಿಗಳಿಗೆ ನಮ್ಮ ಪಕ್ಷದಿಂದ ಸೌಲಭ್ಯಗಳನ್ನು ಒದಗಿಸಬೇಕು ಎಂಬ ವಿಚಾರ ಗಮನದಲ್ಲಿಟ್ಟುಕೊಂಡು ಗ್ರಾಮ ಸ್ವರಾಜ್ ಕಾರ್ಯಕ್ರಮ ಮಾಡಿದ್ದೇವೆ.
ಪಕ್ಷ ಬಲಪಡಿಸಲು ನಾವು ತಳಮಟ್ಟದಿಂದ ಕೆಲಸ ಮಾಡುತ್ತಿದ್ದೇವೆ. ಹೊಸ ಆಯಾಮವನ್ನು ಬಿಜೆಪಿ ಹುಡಿಕಿ ಹೊರಟಿದೆ.
ಪಕ್ಷ ಬೇರುಮಟ್ಟದಲ್ಲಿ ಗಟ್ಟಿಗೊಳ್ಳಲು ಸಾಧ್ಯವಿದೆ. ಗ್ರಾಪಂ ಚುನಾವಣೆಯಲ್ಲಿ 80% ರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕಿದೆ. ಆ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಇನ್ನು ಪಕ್ಷದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂಬ ಪ್ರಶ್ನೆ ಉತ್ತರಿಸಿ, ಪಕ್ಷದೊಳಗೆ ಭಿನ್ನಮತ ಇಲ್ಲಾ. ಒಗ್ಗಟ್ಟಿನ ಕೊರತೆ ಕಂಡಿಲ್ಲಾ.
ಗಾಳಿ ಸುದ್ದಿಗಳಿಗೆ ರೆಕ್ಕೆ ಪುಕ್ಕ ಕಟ್ಟಲಾಗುತ್ತಿದೆ. 2023 ರ ಚುನಾವಣೆಯವರೆಗೆ ಸಿಎಂ ಯಡಿಯೂರಪ್ಪ ಅವರೇ ಆಗಿರ್ತಾರೆ.
ಇನ್ನೂ ಎರಡೂವರೇ ವರ್ಷ ಯಡಿಯೂರಪ್ಪ ಸಿಎಂ ಆಗಿರ್ತಾರೆ. ಯಾವುದೇ ಅನುಮಾನವಿಲ್ಲಾ. ಗಾಳಿ ಸುದ್ದಿಗಳಿಗೆ ಕಿವಿಗೋಡೋದು ಬೇಡ ಎಂದ ಸವದಿ ಸ್ಪಷ್ಟಪಡಿಸಿದರು. ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್: ಜಾಮೀನಿಗಾಗಿ ಸುಪ್ರೀಂ ಕದತಟ್ಟಿದ `ಡ್ರಗ್ಗಿಣಿ’
ಬಳಿಕ ಆನಂದ್ ಸಿಂಗ್ ಮಾತನಾಡಿ, ವಿಜಯನಗರ ಜಿಲ್ಲೆ ರಚನೆಗೆ ಅಬ್ಜೇಕ್ಷನ್ ಕಾಲ್ ಮಾಡಲಾಗುತ್ತದೆ.
ಪಬ್ಲಿಕ್ ಹಿರಿಂಗ್ ಗೆ ಅವಕಾಶ ಇದೆ. ಇನ್ನೂ ನಾಲ್ಕೈದು ದಿನದಲ್ಲಿ ಕಾಲ್ ಮಾಡಲಾಗುತ್ತದೆ. ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತಗೊಂಡು ಮಾಡಿದ್ದೇವೆ. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










