Belgaum | ಯುವತಿಯರ ಹೆಸರೇಳಿ ಯುವಕರಿಗೆ ವಂಚನೆ – ಆರೋಪಿ ಅಂದರ್
ಬೆಳಗಾವಿ : ಫೇಸ್ ಬುಕ್ ನಲ್ಲಿ ಯುವತಿ ಫೋಟೋ ಹಾಕಿಕೊಂಡು ಯುವಕರಿಂದ ಹಣ ಪಡೆದು ವಂಚಿಸುತ್ತಿದ್ದ ಖದೀಮನನ್ನು ಬೆಳಗಾವಿ ಸೈಬರ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 29 ವರ್ಷದ ನಿಪ್ಪಾಣಿ ತಾಲೂಕಿನ ನಾಯಿಹಿಂಗ್ಲಜ್ ಗ್ರಾಮದ ಮಹಾಂತೇಶ್ ಮೂಡಸೆ ಬಂಧಿತ ಆರೋಪಿಯಾಗಿದ್ದಾರೆ.
ಮಹಾಂತೇಶ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಯುವತಿಯರ ಸುಂದರ ಪೋಟೋ ಡೌನ್ಲೋಡ್ ಮಾಡಿಕೊಂಡು ಬಳಿಕ ಯುವತಿಯರ ಹೆಸರಿನಲ್ಲಿ ನಕಲಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆ ಓಪನ್ ಮಾಡುತ್ತಿದ್ದ. ಅದೇ ಖಾತೆಯಿಂದ ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ಯುವಕರಿಗೆ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಆ ನಂತರ ಯುವಕರನ್ನ ಪರಿಚಯ ಮಾಡಿಕೊಂಡು ಕೆಲವರಿಂದ ಲಕ್ಷಾಂತರ ರುಪಾಯಿ ಪಡೆದುಕೊಂಡು ವಂಚಿಸಿದ್ದಾರೆ.
ಈ ನಡುವೆ ತನ್ನ ಫೋಟೊ ಬೇರೆಯವರು ಬಳಸುತ್ತಿದ್ದ ವಿಚಾರ ತಿಳಿದ ಯುವತಿಯಿಂದ ಬೆಳಗಾವಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಅನ್ವಯ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಅಂದಹಾಗೆ ಮಹಾಂತೇಶ್ ಕೆಳದ ಹಲವು ದಿನಗಳ ಹಿಂದೆ ನಡೆದಿದ್ದ ಪಿಎಸ್ ಐ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿದ್ದರಂತೆ.