Belgaum | ಅಪಾಯದ ಮಟ್ಟ ಮೀರಿದ ಕೃಷ್ಣಾ.. ಜನರಲ್ಲಿ ಆತಂಕ
ಬೆಳಗಾವಿ : ಮಹಾರಾಷ್ಟ್ರದಲ್ಲಿ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಮುಂದುವರೆದೆ.
ಇತ್ತ ಬೆಳಗಾವಿ ಜಿಲ್ಲೆಯಲ್ಲೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ.
ಹೀಗಾಗಿ ಜಿಲ್ಲೆಯ ಸಪ್ತನದಿಗಳ ಒಳ ಹರಿವು ದಿನೇ ದಿನೇ ಹೆಚ್ಚಳವಾಗುತ್ತಿದೆ.
ಇತ್ತ ಒಂದು ಲಕ್ಷ ಕ್ಯೂಸೆಕ್ಸ್ ನೀರು ಕೃಷ್ಣಾ ನದಿಗೆ ಸೇರುತ್ತಿದೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ನಿಂದ 82 ಸಾವಿರ ಕ್ಯೂಸೆಕ್ಸ್, ವೇದಗಂಗಾ, ದೂಧಗಂಗಾ ನದಿಯಿಂದ 22 ಸಾವಿರ ಕ್ಯೂಸೆಕ್, ಒಟ್ಟು ಕೃಷ್ಣಾ ನದಿಗೆ 1 ಲಕ್ಷ 4 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಘಟಪ್ರಭಾ ನದಿ ಒಳ ಹರಿವು 27 ಸಾವಿರದಿಂದ 22 ಸಾವಿರ ಕ್ಯೂಸೆಕ್ ಗೆ ತಗ್ಗಿದೆ.
ಮಲಪ್ರಭಾ ನದಿ ಒಳ ಹರಿವು 10 ಸಾವಿರ ಕ್ಯೂಸೆಕ್ ಇದೆ. ನಿಪ್ಪಾಣಿ, ಚಿಕ್ಕೋಡಿ ತಾಲೂಕಿನಲ್ಲಿ ಒಟ್ಟು 10 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿದೆ.
ಈ ಸೇತುವೆಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದೆ.
ಜನರು ಪರ್ಯಾಯ ಮಾರ್ಗದಿಂದ ಸಂಚಾರ ನಡೆಸುತ್ತಿದ್ದಾರೆ.
ಅಲ್ಲದೆ ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ.








