ಬೆಳಗಾವಿ ಉದ್ವಿಗ್ನ | ಕರವೇ – ಪೊಲೀಸರ ಮಧ್ಯೆ ಜಟಾಪಟಿ Belgaum saaksha tv
ಬೆಳಗಾವಿ : ಕುಂದಾನಗರಿಯ ಪೀರನವಾಡಿ ರಾಯಣ್ಣ ಮೂರ್ತಿ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕರವೇ ಪ್ರತಿಭಟನಾ ರ್ಯಾಲಿ ಆರಂಭಿಸಿದ್ದು, ಕರವೇ ಕಾರ್ಯಕರ್ತರು ಪೊಲೀಸರ ಮಧ್ಯೆ ಜಟಾಪಟಿ ನಡೆದಿದೆ.
ಸ್ಥಳದಲ್ಲಿ 144 ಸೆಕ್ಷನ್ ಜಾರಿ ಇರುವುದರಿಂದ ಪೊಲೀಸರು ನೂರಾರು ಕರವೇ ಕಾರ್ಯಕರ್ತರು ವಶಕ್ಕೆ ಪಡೆದಿದ್ದಾರೆ.
ಇದರಿಂದ ಪೊಲೀಸರ ವಿರುದ್ಧ ಕರವೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಎಂಇಎಸ ಪುಂಡರನ್ನ ಬಂಧಿಸಬೇಕು. ನಾಡದ್ರೋಹಿ ಎಂಇಎಸ ಪುಂಡರನ್ನ ಗಡಿ ಪಾರು ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.