ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಕಟ್ಟಡ ಮಾಲಿಕ Saaksha Tv
ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಯುವತಿಗೆ ವಂಚಿಸಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಗೋಕಾಕ್‍ನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಯವತಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಈ ವಸತಿ ನಿಲಯ ಕಟ್ಟಡ ಮಾಲೀಕನ ಪುತ್ರ ಆದರ್ಶ ಯುವತಿ ಮಾಲದಿನ್ನಿ 2016ರ ಡಿಸೆಂಬರ್ 5ರಂದು ಅತ್ಯಾಚಾರವೆಸಗಿ, ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಇದಾದ ಬಳಿಕ ಈ ಸಂಬಂಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಮುಂದಾದಾಗ ಮದುವೆಯಾಗುತ್ತೇನೆ ಎಂದು ತನ್ನನ್ನು ನಂಬಿಸಿದ್ದನು. ಆದರೆ ಇದೀಗ ತನಗೆ ಮೋಸ ಮಾಡಿ ಬೇರೆ ಯುವತಿ ಜೊತೆ ಗೋಕಾಕ್‍ನಲ್ಲಿ ಮದುವೆಯಾಗಲು ಮುಂದಾಗಿದ್ದಾನೆ ಎಂದು ಯುವತಿ ತನ್ನ ಅಳಲನ್ನು ತೊಡಿಕೊಂಡಿದ್ದಾಳೆ.
ಈ ವಿಚಾರವಾಗಿ ಆದರ್ಶ್ ತಂದೆ, ತಾಯಿಗೆ ಹೇಳಿದರೂ ಹಣದ ಆಮಿಷ ತೋರಿಸಿ ನಂತರ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಯುವತಿ ಇದೀಗ ನ್ಯಾಯಕ್ಕಾಗಿ ಆಗ್ರಹಿಸಿ ಬೆಳಗಾವಿ ಎಸ್‍ಪಿ ಮೊರೆ ಹೋಗಿದ್ದಾಳೆ.








