ಬಳ್ಳಾರಿ : ಮಹಾನಗರ ಪಾಲಿಕೆಯ ಆಯುಕ್ತೆಯೇ ಫೀಲ್ಡ್ ಗಿಳಿದು ಹಣ ಪಡೆಯುತ್ತಿರೋ ವಿಡಿಯೋ ಇದೀಗ ವೈರಲ್ ಆಗಿದ್ದು, ಆಯುಕ್ತೆ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ಆದ್ರೆ, ಈ ಎಲ್ಲ ಆರೋಪವನ್ನು ಆಯುಕ್ತೆ ನಿರಾಕರಿಸುತ್ತಿದ್ದಾರೆ.
ಹೌದು..! ಬಳ್ಳಾರಿ Bellary ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಖಾತೆ ಬದಲಾವಣೆ ಮಾಡಿ ಫಾರಂ 2 ಮತ್ತು 3 ಕೊಡಲು ಐದು ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಎಂಬುವವರು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಬಳ್ಳಾರಿ ಮೂಲದ ಬದರಿ ಎನ್ನುವವರ ಆಸ್ತಿ ವರ್ಗಾವಣೆ ಮಾಡಬೇಕಿತ್ತು. ಇದಕ್ಕೆ ಆಯುಕ್ತೆ ತುಷಾರಮಣಿ ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಆಡಿಯೋದಲ್ಲಿ ಮಾತನಾಡಿದ ಆಯುಕ್ತೆ ಹಣ ಪಡೆಯಲು ರಾತ್ರಿ ವೇಳೆ ಖುದ್ದು, ಕಾರ್ ಚಾಲನೆ ಮಾಡಿಕೊಂಡು ಬಂದಿದ್ದಾರೆ. ಈ ಬಗ್ಗೆ ಸಂಪೂರ್ಣ ದಾಖಲೆ ಸಮೇತವಾಗಿ ಸಾಮಾಜಿಕ ಹೋರಾಟಗಾರ ರಾಜ ಶೇಖರ ಮುಲಾಲಿ ಜೊತೆ ಬದರಿ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ರೈತರ ಹೆಸರಿನಲ್ಲಿ ನಕಲಿ ಬಿಲ್ : ಮರ್ಕೂರಿ ಪಾಲಿಮರ್ಸ್ ಸಂಸ್ಥೆ ವಿರುದ್ಧ ದೂರು
ಇನ್ನೂ ಹಣ ಪಡೆಯುತ್ತಿರೋ ವಿಡಿಯೋ ವೈರಲ್ ಆಗಿರೋ ಹಿನ್ನಲೆ ಯಲ್ಲಿ ಬಳ್ಳಾರಿಯಲ್ಲಿಂದು ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿವೆ.
ಈ ಮಧ್ಯೆ ತಮ್ಮ ಮೇಲಿನ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಆಯುಕ್ತೆ ಇದಲ್ಲ ಕೆಲ ವರು ಕುತಂತ್ರದಿಂದ ಮಾಡ್ತಿರೋ ಆರೋಪವಾಗಿದೆ. ಪಾಲಿಕೆಯಲ್ಲಿ ಕೆಲ ಕಟ್ಟುನಿಟ್ಟಿನ ನಿರ್ಧಾರಗಳು ಇದಕ್ಕೆ ಕಾರಣ ಎಂದು ಪ್ರತಿಕ್ರಿಯೆ ನೀಡಿದ್ದು, ಯಾವುದೇ ತನಿಖೆಗೂ ತಾವು ಸಿದ್ಧವೆಂದು ಪ್ರತಿಕ್ರಿಯೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel