ಬಳ್ಳಾರಿ: ಕೊರೊನಾ ಸೋಂಕಿನ ಹಾವಳಿಯಿಂದ ಈಗಾಗಲೇ ರಾಜ್ಯದ ಜನರು ಕಂಗಾಲಾಗಿದ್ದಾರೆ. ಇತ್ತ ಕೊರೊನಾ ಸೊಂಕಿತರು ಹಾಗೂ ಸೋಂಕಿನ ಲಕ್ಷಣ ಇರುವವರನ್ನು ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತೆ. ಆದ್ರೆ ಕ್ವರಂಟೈನ್ ನಲ್ಲಿ ಇರುವವರಿಗೆ ಕೊರೊನಾ ಸೋಂಕು ತಗುಲುತ್ತೋ ಇಲ್ವೋ ಗೊತ್ತಿಲ್ಲಾ. ಆದ್ರೆ ಬೇರೆ ಯಾವುದಾದರೂ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗೋದಂತು ಗ್ಯಾರಂಟಿ ಅನ್ನುವ ಹಾಗಿದೆ ಅವರ ಪರಿಸ್ಥಿತಿ. ಇದಕ್ಕೆ ಪೂರಕವೆಂಬತೆಯೇ ಇದೆ ಬಳ್ಳಾರಿಯ ಕ್ವಾರಂಟೈನ್ ಕೇಂದ್ರ.
ಹೌದು ಬಳ್ಳಾರಿಯ ಡೆಂಟಲ್ ಕಾಲೇಜಿನಲ್ಲಿನ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆ ಆಗರವಾಗಿ ಮಾರ್ಪಾಡಾಗಿದೆ. ಸ್ವಚ್ಛತೆ ಇಲ್ಲದೆ, ಸರಿಯಾದ ಆಹಾರವಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆಯಂತೂ ಮರಿಚಿಕೆಯಂತಾಗಿದೆ. ಮತ್ತೊಂದೆಡೆ ಸರಿಯಾದ ಗುಣಮಟ್ಟದ ಆಹಾರದ ಬಾಗ್ಯವೂ ರೋಗಿಗಳಿಗೆ ಇಲ್ಲ. ಊಟದಲ್ಲಿ ಹುಳುಗಳು ಮತ್ತು ಕಟ್ಟಿಗೆಯ ತುಂಡುಗಳು ಸಿಗುತ್ತಿದ್ದು, ಗೊತ್ತಿಲ್ಲದೆ ತಿಂದ್ರೆ ಹೊಟ್ಟೆ ಸೇರಿ ಮತ್ತೆ ಬೇರೆಯದ್ದೇ ಕಾಯಿಲೆಗೆ ಎಡೆ ಮಾಡಿಕೊಡೋದು ಪಕ್ಕಾ.
ಮತ್ತೊಂದೆಡೆ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಎದ್ದೆದ್ದು ಕಾಣುತ್ತೆ. ನಿತ್ಯ ಮೊಬೈಲ್ ನಲ್ಲಿ ಸಿಬ್ಬಂದಿ ಕಾಲಹರಣ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ರೋಗಿಗಳ ಅಸಮಾಧಾನಕ್ಕೆ ಕಾರಣವಾಗಿದೆ.








