ADVERTISEMENT
Friday, October 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಳ್ಳಾರಿ ಜಿಲ್ಲೆ ಇಬ್ಭಾಗ ಪಕ್ಕಾ: ವಿಜಯನಗರ ಜಿಲ್ಲೆಗೆ ಬಿಎಸ್‍ವೈ ಗ್ರೀನ್ ಸಿಗ್ನಲ್..!

admin by admin
September 22, 2020
in Newsbeat, Politics, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬಳ್ಳಾರಿ ಜಿಲ್ಲೆ: ಬಳ್ಳಾರಿ, ಕುರುಗೋಡು, ಸಿರಗುಪ್ಪ, ಸಂಡೂರು, ಕೂಡ್ಲಿಗಿ
ವಿಜಯನಗರ ಜಿಲ್ಲೆ: ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ
ಬೆಂಗಳೂರು: ವಿವಾದಿತ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಿ ವಿಜಯನಗರ ಜಿಲ್ಲೆ ರಚನೆಗೆ ಇಲ್ಲಿಯವರೆಗೆ ಎದುರಾಗಿದ್ದ ಅಡೆತಡೆಗಳು ದೂರವಾದ ಹಿನ್ನೆಲೆಯಲ್ಲಿ ನೂತನ ಜಿಲ್ಲೆ ರಚನೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗ್ರೀನ್ ಸಿಗ್ನಲ್ ನೀಡಿದ್ದಾರೆ.
11 ತಾಲೂಕುಗಳನ್ನು ಹೊಂದಿರುವ ಬಳ್ಳಾರಿ ಜಿಲ್ಲೆಯನ್ನು 5:6 ತಾಲೂಕುಗಳಾಗಿ ಹಂಚಿಕೆ ಮಾಡಿ ನೂತನ ವಿಜಯನಗರ ಜಿಲ್ಲೆ ಸ್ಥಾಪನೆ ಮಾಡುವುದು ತುಂಬಾ ಅಗತ್ಯವಿದೆ. ಹೀಗಾಗಿ ಮುಂದಿನ ಸಚಿವ ಸಂಪುಟ ಸಭೆಗೆ ಈ ವಿಷಯನ್ನು ಮಂಡಿಸಲು ಸೂಚಿಸಿ ಬಿಎಸ್‍ವೈ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಇಲ್ಲಿಯವರೆಗೆ ಬಳ್ಳಾರಿ ಜಿಲ್ಲೆ ವಿಭಜನೆಗೆ ಎದುರಾಗಿದ್ದ ಪರ-ವಿರೋಧಿ ಹೋರಾಟಗಳಿಗೆ ತಲೆ ಕೆಡಿಸಿಕೊಳ್ಳದೆ ಸಚಿವ ಆನಂದ್‍ಸಿಂಗ್ ಒತ್ತಡಕ್ಕೆ ಮುಖ್ಯಮಂತ್ರಿಗಳು ಮಣಿದಿದ್ದಾರೆ ಎಂಬುದಕ್ಕೆ ಈ ಟಿಪ್ಪಣಿಯೇ ಉತ್ತರ ನೀಡಿದೆ.

ಬಳ್ಳಾರಿ ಜಿಲ್ಲೆ ವಿಭಜನೆಗೆ ಬಿಜೆಪಿ ಶಾಸಕರೇ ಆದ ಸೋಮಶೇಖರ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯವುದೇ ಕಾರಣಕ್ಕೂ ಜಿಲ್ಲೆ ವಿಭಜನೆ ಮಾಡಲು ಬಿಡುವುದಿಲ್ಲ ಎಂದು ಬಿಎಸ್‍ವೈ ಮುಂದೆಯೂ ತಮ್ಮ ಆಕ್ರೋಶ ಹೊರಹಾಕಿದ್ದರು.
ಆದರೆ, ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ, ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಈ ಪ್ರಸ್ತಾಪ ಮೂಲೆ ಗುಂಪಾಗಿತ್ತು. ಆದರೆ, ಕೊರೊನಾ ನಡುವೆಯೇ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ನೂತನ ವಿಜಯನಗರ ಜಿಲ್ಲೆ ರಚನೆಗೆ ಪ್ರಕ್ರಿಯೆಗೆ ಮರುಜೀವ ಬಂದಿದೆ.
ಬಳ್ಳಾರಿ ಜಿಲ್ಲೆಯು ತುಂಬಾ ವಿಸ್ತಾರವಾಗಿದೆ. ಬಳ್ಳಾರಿ 11 ಕಂದಾಯ ತಾಲೂಕುಗಳನ್ನು ಹಾಗೂ 3 ಕಂದಾಯ ಉಪವಿಭಾಗಗಳನ್ನು ಒಳಗೊಂಡಿರುವ ಅತಿದೊಡ್ಡ ಜಿಲ್ಲೆ ಎನಿಸಿಕೊಂಡಿದೆ. ಕೆಲವೊಂದು ಪ್ರದೇಶಗಳು ಜಿಲ್ಲಾ ಕೇಂದ್ರದಿಂದ 200 ಕಿ.ಮೀ ದೂರದಲ್ಲಿವೆ. ಇದರಿಂದ ಈ ಭಾಗದ ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಜನ ಸಾಮಾನ್ಯರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪುವುದು ತುಂಬಾ ದುಸ್ತರವಾಗಿದೆ.
ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ಪ್ರಸ್ತುತ ಬಳ್ಳಾರಿ ಜಿಲ್ಲೆಯ 11 ತಾಲೂಕುಗಳಲ್ಲಿ ಮೂಲ ಬಳ್ಳಾರಿ ಜಿಲ್ಲೆಯಲ್ಲಿ ಐದು ತಾಲೂಕುಗಳನ್ನು(ಬಳ್ಳಾರಿ, ಕುರುಗೋಡು, ಸಿರಗುಪ್ಪ, ಸಂಡೂರು, ಕೂಡ್ಲಿಗಿ) ಉಳಿಸಿಕೊಂಡು, ಉಳಿದ 6 ತಾಲೂಕುಗಳನ್ನು (ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ) ಸೇರಿಸಿ ಹೊಸಪೇಟೆ ಪಟ್ಟಣವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ನೂತನ ವಿಜಯನಗರ ಜಿಲ್ಲೆ ರಚಿಸುವುದು ತುಂಬಾ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಹೀಗಾಗಿ ನೂತನ ವಿಜಯನಗರ ಜಿಲ್ಲೆ ಸ್ಥಾಪನೆ ಕುರಿತ ವಿಚಾರ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Related posts

ಚುನಾವಣಾ ಆಯುಕ್ತರ ವಿರುದ್ಧದ ಹೋರಾಟವೇ ಮುಳುವಾಯಿತೇ? ರಾಜಕೀಯ ಪ್ರತಿಭಟನೆಯಲ್ಲಿ ಭಾಗಿಯಾದ ಅಮೆರಿಕ ಪ್ರಜೆ:ಅಕ್ಟೋಬರ್ 28ರ ಒಳಗೆ ಭಾರತ ಬಿಟ್ಟು ತೊಲಗಿ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಮುಂಬೈ ಪೊಲೀಸರ ಖಡಕ್ ಡೆಡ್‌ಲೈನ್

ಚುನಾವಣಾ ಆಯುಕ್ತರ ವಿರುದ್ಧದ ಹೋರಾಟವೇ ಮುಳುವಾಯಿತೇ? ರಾಜಕೀಯ ಪ್ರತಿಭಟನೆಯಲ್ಲಿ ಭಾಗಿಯಾದ ಅಮೆರಿಕ ಪ್ರಜೆ:ಅಕ್ಟೋಬರ್ 28ರ ಒಳಗೆ ಭಾರತ ಬಿಟ್ಟು ತೊಲಗಿ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಮುಂಬೈ ಪೊಲೀಸರ ಖಡಕ್ ಡೆಡ್‌ಲೈನ್

October 16, 2026
ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

October 16, 2026

ಇನ್ನಷ್ಟು ಹೊಸ ಜಿಲ್ಲೆ ರಚನೆಗೆ ಹೋರಾಟ ಸಾಧ್ಯತೆ..!
ನೂತನ ವಿಜಯನಗರ ಜಿಲ್ಲೆ ರಚನೆಗೆ ಸರ್ಕಾರ ಕ್ಯಾಬಿನೆಟ್‍ನಲ್ಲಿ ಅನುಮೋದನೆ ನೀಡಿದರೆ ಈಗಾಗಲೇ ಹಲವು ದಶಕಗಳಿಂದ ಬೇಡಿಕೆಯಲ್ಲಿರುವ ಇತರೆ ಜಿಲ್ಲೆಗಳ ರಚನೆಯ ಬೇಡಿಕೆ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ.
ವಿಶೇಷವಾಗಿ ಬೆಳಗಾವಿ ಜಿಲ್ಲೆಯನ್ನು ವಿಭಾಗಿಸಿ ಚಿಕ್ಕೋಡಿ ಜಿಲ್ಲೆ ರಚನೆ ಮಾಡಬೇಕೆಂಬ ಹೋರಾಟ ಕಳೆದ ವರ್ಷದ ತೀವ್ರ ಸ್ವರೂಪ ಪಡೆದಿತ್ತು. ಚಿಕ್ಕೋಡಿ ಜೊತೆಗೆ ಶಿರಸಿ, ಶಿಕಾರಿಪುರ ಸೇರಿದಂತೆ ಹಲವು ಜಿಲ್ಲೆಗಳ ಬೇಡಿಕೆಗಳು ಕೇಳಿ ಬಂದಿದ್ದವು. ಈ ಜಿಲ್ಲೆಗಳ ಬೇಡಿಕೆಗಳಿಗೆ ಸರ್ಕಾರಕ್ಕೆ ಬಿಸಿ ತುಪ್ಪವಾಗುವ ಸಾಧ್ಯತೆ ಇದೆ.

Tags: bellariBSYdivedigreen signalVijayanagar district
ShareTweetSendShare
Join us on:

Related Posts

ಚುನಾವಣಾ ಆಯುಕ್ತರ ವಿರುದ್ಧದ ಹೋರಾಟವೇ ಮುಳುವಾಯಿತೇ? ರಾಜಕೀಯ ಪ್ರತಿಭಟನೆಯಲ್ಲಿ ಭಾಗಿಯಾದ ಅಮೆರಿಕ ಪ್ರಜೆ:ಅಕ್ಟೋಬರ್ 28ರ ಒಳಗೆ ಭಾರತ ಬಿಟ್ಟು ತೊಲಗಿ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಮುಂಬೈ ಪೊಲೀಸರ ಖಡಕ್ ಡೆಡ್‌ಲೈನ್

ಚುನಾವಣಾ ಆಯುಕ್ತರ ವಿರುದ್ಧದ ಹೋರಾಟವೇ ಮುಳುವಾಯಿತೇ? ರಾಜಕೀಯ ಪ್ರತಿಭಟನೆಯಲ್ಲಿ ಭಾಗಿಯಾದ ಅಮೆರಿಕ ಪ್ರಜೆ:ಅಕ್ಟೋಬರ್ 28ರ ಒಳಗೆ ಭಾರತ ಬಿಟ್ಟು ತೊಲಗಿ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಮುಂಬೈ ಪೊಲೀಸರ ಖಡಕ್ ಡೆಡ್‌ಲೈನ್

by Shwetha
October 16, 2026
0

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಸೂಪರ್ ಸ್ಟಾರ್ ಆಮಿರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ ಅವರಿಗೆ ಮುಂಬೈ ಪೊಲೀಸರು ಗಡಿಪಾರು ನೋಟಿಸ್ ಜಾರಿ ಮಾಡಿದ್ದಾರೆ....

ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

by Shwetha
October 16, 2026
0

ಕನ್ನಡದ ಜನಪ್ರಿಯ ನಿರೂಪಕಿ ಆಂಕರ್ ಅನುಶ್ರೀ ಅವರು ಸುದೀರ್ಘ ವಿರಾಮದ ನಂತರ ತಮ್ಮ ಯೂಟ್ಯೂಬ್ ಚಾನಲ್ ಗೆ ಮರಳಿದ್ದಾರೆ. ಆದರೆ ಈ ಪುನರಾಗಮನವು ಅವರಿಗೆ ಶುಭ ಸುದ್ದಿಗಿಂತ...

ಮನೆ ಮುಂದೆ ವಾಹನ ನಿಲ್ಲಿಸಲೂ ಶುಲ್ಕ? ಜಿಬಿಎ ಪಾರ್ಕಿಂಗ್ ಪ್ರಸ್ತಾವನೆಗೆ ತಾತ್ಕಾಲಿಕ ತಡೆ

ಮನೆ ಮುಂದೆ ವಾಹನ ನಿಲ್ಲಿಸಲೂ ಶುಲ್ಕ? ಜಿಬಿಎ ಪಾರ್ಕಿಂಗ್ ಪ್ರಸ್ತಾವನೆಗೆ ತಾತ್ಕಾಲಿಕ ತಡೆ

by Shwetha
October 16, 2026
0

ನಗರದ ಮನೆಗಳ ಮುಂದೆ ಕಾರು ಅಥವಾ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದಕ್ಕೂ ಶುಲ್ಕ ವಿಧಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಪ್ರಸ್ತಾವನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ,...

ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ: ಕರಾವಳಿ, ಮಲೆನಾಡು ಸೇರಿ ಹಲವೆಡೆ IMD ಮುನ್ಸೂಚನೆ

ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ: ಕರಾವಳಿ, ಮಲೆನಾಡು ಸೇರಿ ಹಲವೆಡೆ IMD ಮುನ್ಸೂಚನೆ

by Shwetha
October 16, 2026
0

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 16ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಮತ್ತು...

ನಾಲಿಗೆ ಮೇಲೆ ಹಿಡಿತವಿರಲಿ ನಮ್ಮ ತಂದೆಯ ಬಗ್ಗೆ ಮಾತಾಡಿದ್ರೆ ಸುಮ್ಮನಿರಲ್ಲ,ನಾನು ಬಾಯಿ ಬಿಟ್ಟರೆ ನೀವ್ ಮತ್ತೊಮ್ಮೆ ಹಾರ್ಟ್ ಸರ್ಜರಿ ಮಾಡ್ಕೋಬೇಕಾಗುತ್ತೆ: ಎಚ್‌ಡಿಕೆಗೆ ಪ್ರಿಯಾಂಕ್ ಖರ್ಗೆ  ಎಚ್ಚರಿಕೆ

ನಾಲಿಗೆ ಮೇಲೆ ಹಿಡಿತವಿರಲಿ ನಮ್ಮ ತಂದೆಯ ಬಗ್ಗೆ ಮಾತಾಡಿದ್ರೆ ಸುಮ್ಮನಿರಲ್ಲ,ನಾನು ಬಾಯಿ ಬಿಟ್ಟರೆ ನೀವ್ ಮತ್ತೊಮ್ಮೆ ಹಾರ್ಟ್ ಸರ್ಜರಿ ಮಾಡ್ಕೋಬೇಕಾಗುತ್ತೆ: ಎಚ್‌ಡಿಕೆಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

by Shwetha
October 16, 2026
0

ರಾಜ್ಯ ರಾಜಕಾರಣದ ಸ್ಟಿಂಗ್ ಆಪರೇಷನ್ ಕಿಚ್ಚು ಈಗ ಅತ್ಯಂತ ವೈಯಕ್ತಿಕ ಮಟ್ಟದ ವಾಕ್ಸಮರಕ್ಕೆ ತಿರುಗಿದೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ್ದ ನಾಲಾಯಕ್ ಹೇಳಿಕೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram