25 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಹುಚ್ಚು ನಾಯಿ…
ಬಳ್ಳಾರಿ ಜಿಲ್ಲೆಯ ವಟ್ಟಪ್ಪಗೇರಿಯಲ್ಲಿ ನಿನ್ನೆ ರಾತ್ರಿ ಹುಚ್ಚು ನಾಯಿ ದಾಳಿಯಿಂದಾಗಿ 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡಿರುವ 8 ಜನರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಾತ್ರಿ ಹತ್ತು ಗಂಟೆಯಿಂದ ಹಲವು ಪ್ರದೇಶಗಳಲ್ಲಿ ಓಡಾಡಿರುವ ನಾಯಿ ಮನೆ ಹೊರಗೆ ಮಲಗಿಕೊಂಡಿದ್ದ ಮಕ್ಕಳು ಮಹಿಳೆಯರು ಸೇರಿ ಯುವಕರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ.
ಆಸ್ಪತ್ರೆಗೆ ವಿಮ್ಸ್ ನಿರ್ದೇಶಕ ಡಾ ಗಂಗಾಧರಗೌಡ, ಡಿಹೆಚ್ಓ ಜನಾರ್ದನ, ಪಾಲಿಕೆ ಆಯುಕ್ತ ರುದ್ರೇಶ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಎಲ್ಲರಿಗೂ ಆಂಟಿ ರೇಬಿಯಸ್ ಚಿಕಿತ್ಸೆ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಪಾಲಿಕೆ ಆಯುಕ್ತ ರುದ್ರೇಶ ಮಾತನಾಡಿ “ಜನರಿಗೆ ಮನೆಯ ಹೊರಗೆ ಆಹಾರ ಹಾಕದಂತೆ ಮನವಿ ಮಾಡಿದ್ದೇವೆ. ಪಾಲಿಕೆ ವತಿಯಿಂದ 15 ಜನರು ನಾಯಿ ಹುಡುಕಾಟದಲ್ಲಿ ತೊಡಗಿದ್ದಾರೆ. ಬೀದಿ ನಾಯಿಗಳ ಸಂತಾನಹರಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
Bellary: dog attacked more than 25 people…








