Bellary | ಬಡ್ಡಿ ಆಸೆ ತೋರಿಸಿ ಜನರಿಗೆ ಪಂಗನಾಮ
ಕೋಟ್ಯಂತರ ರೂಪಾಯಿ ಹಣದೊಂದಿಗೆ ಎಸ್ಕೇಪ್
ದಿನಕ್ಕೆ ಲಕ್ಷಕ್ಕೆ ಎರಡು ಪರ್ಸೆಟೆಂಜ್ ಬಡ್ಡಿ
ಬಣ್ಣದ ಮಾತುಗಳನ್ನಾಡಿ ಬಳ್ಳಾರಿ ಜನಕ್ಕೆ ಮೋಸ
ಠಾಣೆಯ ಮೆಟ್ಟಿಲೇರಿದ 400ಕ್ಕೂ ಹೆಚ್ಚು ಜನ
ಬಳ್ಳಾರಿ : ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ರೆ ದಿನಕ್ಕೆ 2 ಸಾವಿರ ರೂಪಾಯಿ ಬಡ್ಡಿ ನೀಡುತ್ತೇವೆ ಎಂದು ಆಸೆ ತೋರಿಸಿ ಜನರಿಗೆ ಟೆನ್ ಪೋರ್ಡ್ ಎಂಬ ಕಂಪನಿ ಪಂಗನಾಮ ಹಾಕಿದೆ.
ಕಂಪನಿಯ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಿ ಬಳ್ಳಾರಿಯ ನಾನೂರಕ್ಕೂ ಹೆಚ್ಚು ಜನರು ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಕೈ ಸುಟ್ಟುಕೊಂಡಿದ್ದಾರೆ.
ಸ್ಟಾಕ್ ಬ್ರೋಕೇರೇಜ್, ಷೇರು ಕಂಪನಿ, ಬಿಟ್ ಕ್ವಾಯಿನ್, ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಟೆನ್ ಪೋರ್ಡ್ ಕಂಪನಿ ಜನರಿಂದ ಕೋಟ್ಯಾಂತರ ರುಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಂಡಿದೆ.
ಆದ್ರೆ ಜನರು ಟೆನ್ ಪೋರ್ಡ್ ಕಂಪನಿಯಲ್ಲಿ ಹತ್ತು ಕೋಟಿಗೂ ಅಧಿಕ ಹಣ ಹೂಡಿಕೆ ಮಾಡುತ್ತಿದ್ದಂತೆ ವಂಚಕರು ಪರಾರಿಯಾಗಿದ್ದಾರೆ.
ಈ ಸಂಬಂಧ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಜನರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರುಗಳ ಅನ್ವಯ ಪೊಲೀಸರು ಟೆನ್ ಪೋರ್ಡ್ ಕಂಪನಿಯ ಮಾಲೀಕ ಅರ್ಜುನ್.
ವೆಂಕಟೇಶ್, ಜಗನ್ ಗಾಗಿ ತನಿಖಾ ತಂಡ ರಚಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ಈ ವರೆಗೂ ಆರೋಪಿಗಳ ಜಾಡು ಪತ್ತೆಯಾಗಿಲ್ಲ. ಇದರಿಂದ ಜನರು ರೋಚಿಹೋಗಿದ್ದು, ಠಾಣೆಗಳತ್ತ ನ್ಯಾಯಕ್ಕಾಗಿ ಸುತ್ತಾಡುತ್ತಿದ್ದಾರೆ.