ಪತ್ನಿ ಬೇರೊಬ್ಬನ ಜೊತೆ ಸರಸ.. ಪತಿ ಆತ್ಮಹತ್ಯೆ
ಬಳ್ಳಾರಿ : ಪತ್ನಿಯ ಅಕ್ರಮ ಸಂಬಂಧ ತಿಳಿದು ಬೇಸರಗೊಂಡ ಪತಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದಿದೆ.
32 ವರ್ಷದ ರಾರಾವಿ ಗ್ರಾಮದ ದೊಡ್ಡ ನಾಗೇಂದ್ರ ಮೃತ ವ್ಯಕ್ತಿ.
ನಾಗೇಂದ್ರ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಲವಾರು ದಿನಗಳಿಂದ ಬೇರೆ ಪುರುಷನೊಂದಿಗೆ ಪತ್ನಿ ಅಕ್ರಮ ಸಂಬಂಧವಿರುವ ಬಗ್ಗೆ ನಾಗೇಂದ್ರಗೆ ಸಂಶಯವಿತ್ತು.
ಇದರಿಂದ ನಾಗೇಂದ್ರ ಮಾನಸಿಕವಾಗಿ ಬಳಲಿದ್ದು, ಇದರಿಂದ ತೀವ್ರ ಬೇಸರಗೊಂಡು ಮನೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.