Benagaluru : ಫೆಬ್ರವರಿ 18 ಮಹಾಶಿವರಾತ್ರಿಯಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ…
ಫೆಬ್ರವರಿ 18 ಶನಿವಾರದಂದು ಮಹಾ ಶಿವರಾತ್ರಿ ಹಬ್ಬ ಹಿನ್ನಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ (ಬಿಬಿಎಂಪಿ) ವ್ಯಾಪ್ತಿಯ ಎಲ್ಲ ಕಸಾಯಿಖಾನೆಗಳನ್ನ ಬಂದ್ ಮಾಡುವಂತೆ ಮತ್ತು ಯಾವುದೇ ರೀತಿಯ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧ ಮಾಡಿ ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹಬ್ಬದ ದಿನವಾದ ಶನಿವಾರ ಎಲ್ಲ ರೀತಿಯ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಈ ಬಗ್ಗೆ ಯಾರೊಬ್ಬರೂ ನಿಯಮ ಹಾಗೂ ಪಾಲಿಕೆಯ ಆದೇಶವನ್ನು ಉಲ್ಲಂಘನೆ ಮಾಡಬಾರದು ಎಂದು ಬಿಬಿಎಂಪಿ ಪಶುಪಾಲನೆಯ ಜಂಟಿ ನಿರ್ದೇಶಕ ರವಿಕುಮಾರ್ ಆದೇಶಿಸಿದ್ದಾರೆ.
ಇದರ ನಡುವೆ ಯಲಹಂಕ ವಾಯುನಲೆಯಲ್ಲಿ ಏರೋ ಇಂಡಿಯಾ 2023 ಪ್ರಾರಂಭವಾದ ಹಿನ್ನೆಲೆ ಈಗಾಗಲೆ ಅಲ್ಲಿ ಮಾಂಸ ಮಾರಾಟ ಮತ್ತು ಹತ್ಯೆಯನ್ನು ನಿಷೇಧಿಸಲಾಗಿದೆ. ಹಾಗೇ ವಾಯುನೆಲೆ ಸುತ್ತುಮುತ್ತ ಮಾಂಸ ವಿಲೇವಾರಿಯನ್ನು ರದ್ದು ಮಾಡಲಾಗಿದೆ.ಮಾಂಸಕ್ಕಾಗಿ ಹದ್ದುಗಳು ಬರುತ್ತವೆ. ಇದರಿಂದ ವಿಮಾನ ಹಾರಾಟಕ್ಕೆ ತೊಂದರೆಯಾಗುತ್ತದೆ ಎಂದು ಮಾಂಸ ವಿಲೇವಾರಿಯನ್ನು ನಿಷೇಧಿಸಲಾಗಿದೆ.
Benagaluru : Animal slaughter, meat sale ban on February 18 Mahashivaratri…