Benefits Of Basil : ಮೊಡವೆ ಮತ್ತು ಚರ್ಮದ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ‘ತುಳಸಿ’
Benefits Of Basil : ಹೊಳೆಯುವ ಚರ್ಮವನ್ನ ಪಡೆಯಲು ಹೆಂಗಳೆಯರು ನಡೆಸದ ಪ್ರಯತ್ನವೇ ಇಲ್ಲ. ಸ್ಕಿನ್ ಟೋನ್ ಅನ್ನ ಸುಧಾರಿಸಲು ನಮ್ಮ ಪ್ರಕೃತಿಯಲ್ಲೇ ಹಲವು ನೈಸರ್ಗಿಕ ಪದಾರ್ಥಗಳು ಹೇರಳವಾಗಿ ಇವೆ. ಇವು ಸ್ಕಿನ್ ಟೋನ್ ಅನ್ನ ಸುಧಾರಿಸಲು ಹಲವು ರೀತಿಯಲ್ಲಿ ಕೆಲಸ ಮಾಡುತ್ತವೆ. ಅಂಥಹ ಗಿಡಗಳಲ್ಲಿ ನಮ್ಮ ಮನೆಯಲ್ಲಿ ಪ್ರತಿನಿತ್ಯ ಕಾಣಸಿಗುವ ತುಳಸಿ ಗಿಡ ಸಹ ಒಂದು ತುಳಸಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ತುಳಸಿಯಲ್ಲಿ ಜೀವಸತ್ವಗಳು, ಖನಿಜಗಳು, ಎಲೆಕ್ಟ್ರೋಲೈಟ್ಗಳು ಮತ್ತು ಫೈಟೊನ್ಯೂಟ್ರಿಯೆಂಟ್ಗಳು ಸಮೃದ್ಧವಾಗಿವೆ. ಮುಖದ ಮೊಡವೆಗಳು ಮತ್ತು ಚರ್ಮ ಸಂಬಂಧಿತ ಅಸ್ವಸ್ಥತೆಗಳನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ತಾಜಾ ತುಳಸಿ ಎಲೆಗಳನ್ನು ತಿನ್ನುವುದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಕ್ರಮೇಣ ಮೊಡವೆಗಳನ್ನು ಕಡಿಮೆ ಮಾಡುತ್ತದೆ.
ತುಳಸಿ ಎಲೆಗಳ ಪೇಸ್ಟ್ಗೆ ಸ್ವಲ್ಪ ಅರಿಶಿನ ಸೇರಿಸಿ ಮತ್ತು ನಿಯಮಿತವಾಗಿ ವಾರಕ್ಕೆ 2 ಬಾರಿ ಮುಖಕ್ಕೆ ಹಚ್ಚಿ ಹೀಗೆ ಮಾಡುವುದರಿಂದ ಮೊಡವೆಗಳು ಹೋಗುತ್ತವೆ. ತುಳಸಿ ಎಲೆಯ ಪುಡಿಯನ್ನು ಗುಲಾಬಿ ಪುಡಿಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ ರಂಧ್ರಗಳು ತೆರೆದುಕೊಳ್ಳುತ್ತದೆ ಮತ್ತು ಮೊಡವೆ ಮತ್ತು ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತವೆ. ತುಳಸಿ ಎಲೆಗಳ ರಸವನ್ನು ನಿಂಬೆ ರಸದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಕಪ್ಪು ಕಲೆಗಳು ಕಡಿಮೆಯಾಗುತ್ತವೆ.
ತುಳಸಿ ಎಲೆಗಳು, ಬೇವಿನ ಎಲೆಗಳು, ಲವಂಗ ಮತ್ತು ಸ್ವಲ್ಪ ನೀರು ಬೆರೆಸಿ ಪೇಸ್ಟ್ ತಯಾರಿಸಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚುವುದರಿಂದ ಒಳ್ಳೆಯ ಫಲಿತಾಂಶವೂ ಸಿಗುತ್ತದೆ. ತುಳಸಿ ಎಲೆಗಳು, ಹಸಿರು ಚಹಾ ಎಲೆಗಳು ಮತ್ತು ಮೊಸರು ಮಿಶ್ರಣ ಮಾಡಿ ಪೇಸ್ಟ್ ಮಾಡಿ. ನಂತರ ಅದನ್ನು ಫೇಸ್ ಪ್ಯಾಕ್ ಆಗಿ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಹೊಳೆಯುವ ತ್ವಚೆಯನ್ನು ಪಡೆಯಬಹುದು. ಹಾಗೆಯೇ ತುಳಸಿ ಎಲೆಗಳ ಪೇಸ್ಟ್, ಶ್ರೀಗಂಧದ ಪುಡಿ ಮತ್ತು ರೋಸ್ ವಾಟರ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ತುಳಸಿ ಎಲೆ ಮತ್ತು ಪುದೀನಾ ಸೊಪ್ಪಿನ ರಸವನ್ನು ಮುಖಕ್ಕೆ ಹಚ್ಚುವುದರಿಂದ ಪರಿಹಾರ ಸಿಗುತ್ತದೆ.
Benefits Of Basil: Natural remedy for acne and skin problems ‘Tulsi’








