ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ
ಪಶ್ವಿಮ ಬೆಂಗಾಲ್ ನಲ್ಲಿ ವಿಕೃತ ಕಾಮಿ ಅರೆಸ್ಟ್
ಉತ್ತರ ಚಂದನ್ ಪಿಡಿ ಪ್ರದೇಶದಲ್ಲಿ ಘಟನೆ
ಪ್ರದ್ಯುತ್ ಭೂಯಾ ಎಂಬುವವರಿಂದ ಕೃತ್ಯ
ಪ್ರದ್ಯುತ್ ಭೂಯಾಗೆ ನ್ಯಾಯಾಂಗ ಬಂಧನ
ಕೊಲ್ಕತ್ತಾ : ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ 29 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ನಮ್ ಖಾನಾ ಬ್ಲಾಕ್ ನ ಉತ್ತರ ಚಂದನ್ ಪಿಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಪ್ರದ್ಯುತ್ ಭೂಯಾ ಎಂಬುವವರಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

ಹಸುವಿನ ಮಾಲೀಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯ ಪ್ರದ್ಯುತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಪೊಲೀಸರು ಬಂಧಿಸಿ ಕಾಕದ್ವೀಪ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಉತ್ತರ ಚಂದನಪಿಡಿ ನಿವಾಸಿ ಆರತಿ ಭೂಯಾ ಎಂಬುವವರ ದನದ ಕೊಟ್ಟಿಗೆಗೆ ಪ್ರದ್ಯುತ್ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಹಸು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.








