Bengaluru : ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯನ್ನು ವಜಾಗೊಳಿಸಿದ ಬೆಂಗಳೂರು ಕಂಪನಿ..!!
ಮುಂಬೈ : ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರು ಕಂಪನಿಯ ಉದ್ಯಮಿಯೋರ್ವ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ಬೆನ್ನಲ್ಲೇ , ಆತನನ್ನ ಕೆಲಸದಿಂದ ವಜಾಗೊಳಿಸಲಾಗಿದೆ..
ಈ ವಿಕೃತ ವ್ಯಕ್ತಿಯನ್ನ ವೇಲ್ಸ್ ಫಾರ್ಗೋ ಕಂಪನಿ ವಜಾಗೊಳಿಸಿದೆ. ಮದ್ಯದ ಅಮಲಿನಲ್ಲಿದ್ದ ಈತ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಹಿರಿಯ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿ ಸಭ್ಯತೆಯ ಎಲ್ಲಾ ಎಲ್ಲೆಯನ್ನ ಮೀರಿದ್ದಾನೆ..
ಅಮೆರಿಕದ ಹಣಕಾಸು ಸಂಸ್ಥೆ ವೇಲ್ಸ್ ಫಾರ್ಗೋ ಸಂಸ್ಥೆಯ ಭಾರತ ಉಪಾಧ್ಯಕ್ಷನಾಗಿದ್ದ ಶಂಕರ್ ಮಿಶ್ರಾನನ್ನ ಬೆಂಗಳೂರಿನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ..
ಈ ಪ್ರಕರಣದಿಂದ ತೀವ್ರ ಮುಜುಗರ ಅನುಭವಿಸಿದ ವೇಲ್ಸ್ ಫಾರ್ಗೋ (Wells Fargo) ಸಂಸ್ಥೆ ಶಂಕರ್ ಮಿಶ್ರಾ ನನ್ನ ಕೆಲಸದಿಂದಲೇ ವಜಾ ಮಾಡಿದೆ.








