5 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ – ಪ್ರಧಾನಿಯಿಂದ ಉದ್ಘಾಟನೆ…
ಸುಮಾರು 5000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಉದ್ಘಾಟಿಸಲಿದ್ದಾರೆ.
ಟರ್ಮಿನಲ್ 2 ಅನ್ನ ಉದ್ಯಾನ ನಗರಿ ಹೆಸರಿಗೆ ಗೌರವಾರ್ಥವಾಗಿ ವಿನ್ಯಾಸಗೊಳಿಸಲಾಗಿದೆ; ಪ್ರಯಾಣಿಕರಿಗೆ ಉದ್ಯಾನದಲ್ಲಿ ನಡೆಯುವಂತಯ ಅನುಭವವನ್ನ ನೀಡಲಿದೆ.
https://twitter.com/ANI/status/1590207729821700097
ಟರ್ಮಿನಲ್ 2 ಉದ್ಘಾಟನೆಯ ನಂತರ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಹಾಗೂ ಚೆಕ್-ಇನ್ ಮತ್ತು ವಲಸೆಗಾಗಿ ಕೌಂಟರ್ಗಳ ಸಂಖ್ಯೆ ಹೆಚ್ಚಾಗಲಿದೆ. ಇದು ವಾರ್ಷಿಕವಾಗಿ ಸುಮಾರು 2.5 ಕೋಟಿಯಿಂದ ಸುಮಾರು 5-6 ಕೋಟಿ ಪ್ರಯಾಣಿಕರನ್ನ ನಿಭಾಯಿಸಲು ಸಾಧ್ಯವಾಗುತ್ತದೆ.
Bengaluru Airport : PM Modi to inaugurate Terminal 2 of Kempegowda airport in Bengaluru on Nov 11








