Bengaluru Bakery Case : ಬೇಕರಿಗೆ ನುಗ್ಗಿ ಹಲ್ಲೆ ನಡೆಸಿದ್ದ ಪುಂಡರು ಅಂದರ್ – Video
ಇತ್ತೀಚೆಗೆ ಬೇಕರಿಗೆ ನುಗ್ಗಿ ಯುವಕರಿಬ್ಬರ ಮೇಲೆ ಪುಡಿ ರೌಡಿಗಳ ಗ್ಯಾಂಗ್ ಒಂದು ಹಲ್ಲೆ ಮಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು..
ಇದೀಗ ಹಲ್ಲೆ ನಡೆಸಿದ್ದ ಪುಡಿ ರೌಡಿಗಳ ಗ್ಯಾಂಗ್ ನ ಮೂವರನ್ನ ಪೊಲೀಸರು ಒದ್ದು ಒಳಗಾಕಿದ್ದಾರೆ.. ಅಶ್ವಥ್ ನಗರದ ಕಾರ್ತಿಕ್ ( 20) , ಸಲ್ಮಾನ್ (23) , ಕಾರ್ತಿಕ್ (23) ಬಂಧಿತರು..
ಈ ಕಿಡಿಗೇಡಿಗಳು ಉಡುಪಿಯ ಬೈಂದೂರಿನ ಯುವಕರಾದ ನವೀನ್ ಶೆಟ್ಟಿ ಹಾಗೂ ಪ್ರಜ್ವಲ್ ಶೆಟ್ಟಿ ಎಂಬುವವರನ್ನ ಬೇಕರಿಗೆ ನುಗ್ಗಿ ಮನಸೋ ಇಚ್ಛೆ ಥಳಿಸಿದ್ದರು… ಬೇಕರಿಯಲ್ಲಿದ್ದ ಸಾಮಾನುಗಳನ್ನ ಧ್ವಂಸ ಮಾಡಿದ್ದರು.
ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಭುಗಿಲೆದ್ದಿದೆ.. ನೆಮ್ಮದಿಯಾಗಿ ದುಡಿದು ಜೀವನ ಸಾಗಿಸೋದಕ್ಕೂ ಬಿಡದೇ ಈ ರೀತಿ ಹಿಂಸೆ ನೀಡುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯ ಹೇರಲಾಗುತ್ತಿದೆ..
In #Bengaluru: #Gang of 5 #attacks bakery staff when the latter insist that money be paid for cigarettes.
👇in #Munekolalu near #Marathahalli. Three of them arrested. @WFRising @NammaBengaluroo @BLRrocKS @TOIBengaluru @Dnekundi_rising @RisingVarthur @NammaKarnataka_ pic.twitter.com/qBrmKSCGlc
— Rakesh Prakash (@rakeshprakash1) December 9, 2022
ಗಾಯಾಳುಗಳ ಪೈಕಿ ಪ್ರಜ್ವಲ್ ಎಂಬಾತನಿಗೆ ಗಂಭೀರವಾಗಿ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಇನ್ನೂ ನವೀನ್ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ..
ನವೀನ್ ಹಾಗೂ ಪ್ರಜ್ವಲ್ ಹೇಳಿಕೆ , ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸದ್ಯಕ್ಕೆ HAL ಪೊಲೀಸರು ಮೂವರನ್ನ ಬಂಧಿಸಲಾಗಿದ್ದು , ಇನ್ನೂ ಉಳಿದವರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ..
ನವೀನ್ ಹಾಗೂ ಪ್ರಜ್ವಲ್ ಮೂಲತಃ ಉಡುಪಿ ಮೂಲದವರು.. ಪಾಲುದಾರಿಕೆಯಲ್ಲಿ ಹೆಚ್ ಎಲ್ ಕುಂದನಹಳ್ಳಿ ಗೇಟ್ ಬಳಿ , ಬ್ರಹ್ಮಲಿಂಗೇಶ್ವರ ಎಂಬ ಹೆಸರಿನಲ್ಲಿ ಬೇಕರಿಯೊಂದನ್ನ ನಡೆಸುತ್ತಿದ್ದರು..
ಈ ಬೇಕರಿಗೆ ಸಿಗರೇಟು ಸೇದಲು ಬಂದಿದ್ದ ಪುಡಿ ರೌಡಿಗಳು ಸಿಗರೇಟಿನ ದುಡ್ಡು ಕೇಳಿದಕ್ಕೆ ಮನಬಂದಂತೆ ಥಳಿಸಿ ಕ್ರೌರ್ಯ ಮೆರೆದಿದ್ದಾರೆ..
ಈ ಸಂ ಬಂಧ ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..