ಪ್ರೋ ಕಬಡ್ಡಿ ಲೀಗ್ ನಲ್ಲಿ ಭಾನವಾರ ನಡೆದ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ 6 ಅಂಕಗಳ ಅಂತರದಲ್ಲಿ ಸೋತಿದ್ದರು ಸಹ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿಯೇ ಇತ್ತು.. 2 ನೇ ಸ್ಥಾನದಲ್ಲಿ ದಬಾಂಗ್ ಡೆಲ್ಲಿ ಇತ್ತು.. ಆದ್ರೆ ನಿನ್ನೆ ದಬಾಂಗ್ ಡೆಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ನಂತರ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೇರಿದ್ರೆ , ದಾಬಾಂಗ್ ಗೆ ರಣರೋಚಕವಾಗಿಯೇ ಟಕ್ಕರ್ ಕೊಟ್ಟ ಪಟ್ನಾ ಉತ್ತಮ ಅಂಕ ಪಡೆದು ಪಾಯಿಂಟ್ಸ್ ಟೇಬಲ್ ನಲ್ಲಿ 2 ನೇ ಸ್ಥಾನಕ್ಕೆ ಬಂದಿದೆ.. ಈ ಮೂಲಕ ಬೆಂಗಳೂರು 3ನೇ ಸ್ಥಾನಕ್ಕೆ ಕುಸಿದಿದೆ..
ದಬಾಂಗ್ ಡೆಲ್ಲಿ ಮತ್ತು ಪಾಟ್ನಾ ಪೈರೇಟ್ಸ್ ನಡುವಿನ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ 32 – 29 ಅಂಕಗಳ ಅಂತರದಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ದಬಾಂಗ್ ಡೆಲ್ಲಿ ವಿರುದ್ಧ ಸೋತಿರುವ ಪಾಟ್ನಾ ಪೈರೇಟ್ಸ್ ತಂಡ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲೇ ಉಳಿದುಕೊಂಡಿದ್ದು, ಈ ಪಂದ್ಯದ ಫಲಿತಾಂಶ ಬೆಂಗಳೂರು ಬುಲ್ಸ್ ತಂಡದ ಮೇಲೆ ಪರಿಣಾಮ ಬೀರಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಬೆಂಗಳೂರು ಬುಲ್ಸ್ ಪಂದ್ಯ ಮುಗಿದ ನಂತರ ತೃತೀಯ ಸ್ಥಾನಕ್ಕೆ ಕುಸಿತ ಕಂಡಿದೆ.
ಪ್ರೋ ಕಬಡ್ಡಿ 8 : ಆಡಿದ್ದು 10 ಪಂದ್ಯಗಳು… 2 ಡ್ರಾ… 8 ಸೋಲು…!!! ಒಂದೂ ಒಂದು ಗೆಲ್ಲದ ಟೀಮ್ ಇದು..!!
ದಬಾಂಗ್ ಡೆಲ್ಲಿ ತಂಡದ ಪ್ರಮುಖ ಆಟಗಾರ ಮಂಜೀತ್ ಚಿಲ್ಲಾರ್ ಪಂದ್ಯದ ಕೊನೆಯ ರೈಡ್ ವೇಳೆ ಟ್ಯಾಕಲ್ ಮಾಡುವ ಮೂಲಕ ದಬಾಂಗ್ ಡೆಲ್ಲಿ ತಂಡಕ್ಕೆ ಜಯವನ್ನು ತಂದುಕೊಟ್ಟರು. ತಂಡದ ಆಲ್ ರೌಂಡರ್ ಸಂದೀಪ್ ನರ್ವಾಲ್ 8 ಅಂಕಗಳನ್ನು ಗಳಿಸುವ ಮೂಲಕ ದಬಂಗ್ ಡೆಲ್ಲಿ ತಂಡವನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಂತೆ ಮಾಡಿದ್ದಾರೆ.
ಪಂದ್ಯದ ಆರಂಭದಲ್ಲಿ ಅಬ್ಬರಿಸಿದ್ದ ಪಾಟ್ನಾ ಪೈರೇಟ್ಸ್ ರೇಡಿಂಗ್ ಬಲಿಷ್ಠವಾಗಿ ಮಾಡಿದ್ರು ವೀಕ್ ಡಿಫೆನ್ಸ್ ನಿಂದ ಸೋಲು ಕಂಡಿದ್ದಾರೆ.. ಆರಂಭದಲ್ಲಿ ಮುಂಚೂಣಿಯಲ್ಲಿದ್ದ ಪಾಟ್ನಾ ಪೈರೇಟ್ಸ್ ತಂಡಕ್ಕೆ ದಬಾಂಗ್ ಡೆಲ್ಲಿ ತಂಡದ ರೈಡರ್ ವಿಜಯ್ ಆಘಾತ ನೀಡಿದರು ಹಾಗೂ ದಬಾಂಗ್ ಡೆಲ್ಲಿ ಪಟ್ನಾ ಪೈರೇಟ್ಸ್ ತಂಡವನ್ನು ಹತ್ತನೇ ನಿಮಿಷದಲ್ಲಿ ಆಲ್ ಔಟ್ ಮಾಡುವ ಮೂಲಕ 4 ಅಂಕಗಳ ಮುನ್ನಡೆಯನ್ನು ಸಾಧಿಸಿತು. ಇನ್ನೂ ಪಟ್ನಾ ಪೈರೇಟ್ಸ್ ತಂಡದ ಆಟಗಾರ ಸಜಿನ್ ಜಿ ಮಂಡಿಯ ಗಾಯಕ್ಕೊಳಗಾಗಿ ಪಂದ್ಯದಿಂದ ಹೊರ ಬಿದ್ದದ್ದು ಪಟ್ನಾ ಪೈರೇಟ್ಸ್ ಹಿನ್ನಡೆಗೆ ಪ್ರಮುಖ ಕಾರಣವಾಯಿತು ಅಂದ್ರೂ ತಪ್ಪಾಗುವುದಿಲ್ಲ..








