ಪ್ರೋ ಕಬಡ್ಡಿ 2021 : ಬೆಂಗಳೂರು ಬುಲ್ಸ್ ಪಂದ್ಯಗಳ ಕಂಪ್ಲೀಟ್ ಶೆಡ್ಯೂಲ್..!
ಬೆಂಗಳೂರು : ಕಬಡ್ಡಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಪ್ರೊ ಕಬಡ್ಡಿ 2021 ಇದೇ ಡಿಸೆಂಬರ್ 22 ರಿಂದ ಆರಂಭವಾಗ್ತಿದೆ.. ಬೆಂಗಳೂರಿನಲ್ಲೇ ನಡೆಯಲಿರುವ ಲೀಗ್ ನ ಶುಭಾರಂಭ ಮಾಡಲಿರೋದು ಬೆಂಗಳೂರು ಬುಲ್ಸ್..
ಬೆಂಗಳೂರು ಬುಲ್ಸ್ ಜೊತೆಗೆ ಯೂ ಮುಂಬಾ ಸೆಣಸಾಟ ನಡೆಸಲಿದೆ.. ಕೋವಿಡ್ ಕಾರಣದಿಂದ ಕಳೆದ ವರ್ಷ ಪ್ರೋ ಕಬಡ್ಡಿ ಲೀಗ್ ರದ್ದಾಗಿತ್ತು.. ಆದ್ರೆ ಈ ವರ್ಷ ಕಬಡ್ಡಿಗೆ ಕಾಲ ಕೂಡಿ ಬಂದಿದೆ.. ಹೀಗಾಗಿ ಕಳೆದ ವರ್ಷ ನಿರಾಸೆಯಾಗಿದ್ದ ಅಭಿಮಾನಿಗಳು ಈಗ ಮತ್ತೆ ಖುಷಿಯಾಗಿದ್ದಾರೆ.
ಪವನ್ ಶೆಹ್ರಾವತ್ ಪಡೆಯನ್ನ ಬೆಂಬಲಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ..
ಪ್ರೊ ಕಬಡ್ಡಿ 2021ಕ್ಕೆ ಮುಂಚಿತವಾಗಿ ಬೆಂಗಳೂರು ಬುಲ್ಸ್ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.
ಪವನ್ ಕುಮಾರ್ ಶೆಹ್ರಾವತ್, ಅಮಿತ್ ಶೆರಾನ್, ಬಂಟಿ, ಮೋಹಿತ್ ಸೆಹ್ರಾವತ್ ಮತ್ತು ಸೌರಭ್ ನಂದಲ್ ಅವರು ಬೆಂಗಳೂರು ಬುಲ್ಸ್ ನಲ್ಲೇ ಉಳಿದುಕೊಂಡಿದ್ದಾರೆ..
ಆದ್ರೆ ಇಷ್ಟು ವರ್ಷಗಳ ಕಾಲ ಬೆಂಗಳೂರು ಬುಲ್ಸ್ ನ ಮುನ್ನೆಡೆಸಿದ ಮಾಜಿ ನಾಯಕ ರೋಹಿತ್ ಕುಮಾರ್ ಅವರನ್ನು ಟೀಮ್ ಕೈಬಿಟ್ಟಿದೆ.. ಅಲ್ಲದೇ ಬೆಂಗಳೂರು ಬುಲ್ಸ್ ನಲ್ಲಿ ಆಡ್ತಿದ್ದ ಸುಮಿತ್ ಸಿಂಗ್ ಕೂಡ ಈಗ ಬೆಂಗಾಲ್ ವಾರಿಯರ್ಸ್ ಪರ ಆಡಲಿದ್ದಾರೆ..
ಪ್ರೊ ಕಬಡ್ಡಿ 2021 ಹರಾಜಿನಲ್ಲಿ ಬೆಂಗಳೂರು ಬುಲ್ಸ್ , ಜಿಯಾವುರ್ ರೆಹಮಾನ್, ಅಬೋಲ್ ಅಲ್ಫಾಜ್ , ಮಗ್ಸೌದ್ಲೌ ಮಹಾಲಿ ಮತ್ತು ಡಾಂಗ್ ಜಿಯೋನ್ ಲೀ ಅವರನ್ನು ತಮ್ಮ ಟೀಮ್ ಗೆ ಸೇರಿಸಿಕೊಂಡಿದೆ ಫ್ರಾಂಚೈಸಿ.
ಭಾರತೀಯ ಆಟಗಾರರ ಬಗ್ಗೆ ಮಾತನಾಡೋದಾದ್ರೆ ಚಂದ್ರನ್ ರಂಜಿತ್, ಮಹೇಂದರ್ ಸಿಂಗ್, ದೀಪಕ್ ನರ್ವಾಲ್, ಮೋರ್ ಜಿಬಿ, ಅಂಕಿತ್, ವಿಕಾಸ್ ಮತ್ತು ಮಯೂರ್ ಕದಮ್ ಪವನ್ ಕುಮಾರ್ ಸೆಹ್ರಾವತ್ ಟೀಮ್ ನ ಬಲವಾಗಲಿದ್ದಾರೆ..
ಈಗಾಗಲೇ ಸಂಘಟಕರು ಪ್ರೊ ಕಬಡ್ಡಿ 2021 ರ ಮೊದಲ ವೇಳಾಪಟ್ಟಿಯನ್ನು ಘೋಷಿಸಿದ್ದಾರೆ. ಮೊದಲ ಹಂತದ ಬೆಂಗಳೂರು ಬುಲ್ಸ್‌ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
PKL 6 ವಿಜೇತರು ಪ್ರೊ ಕಬಡ್ಡಿ 2021 ರ ಮೊದಲಾರ್ಧದಲ್ಲಿ 11 ಪಂದ್ಯಗಳನ್ನು ಆಡಲು ನಿಗದಿಪಡಿಸಲಾಗಿದೆ. ಅವರು ಎಲ್ಲಾ ಇತರ ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡುತ್ತಾರೆ. ಪವನ್ ಕುಮಾರ್ ಸೆಹ್ರಾವತ್ ಬ್ರಿಗೇಡ್ ಡಿಸೆಂಬರ್ 2021 ರಲ್ಲಿ ನಾಲ್ಕು ಪಂದ್ಯಗಳನ್ನು ಮತ್ತು 2022 ರ ಜನವರಿಯಲ್ಲಿ ಏಳು ಪಂದ್ಯಗಳನ್ನು ಆಡಲಿದ್ದಾರೆ.
ಡಿಸೆಂಬರ್ 22: ಬೆಂಗಳೂರು ಬುಲ್ಸ್ ವಿರುದ್ಧ ಯು ಮುಂಬಾ ಸಂಜೆ 7:30 ಕ್ಕೆ
ಡಿಸೆಂಬರ್ 24: ಬೆಂಗಳೂರು ಬುಲ್ಸ್ ವಿರುದ್ಧ ತಮಿಳು ತಲೈವಾಸ್ : ರಾತ್ರಿ 8:30ಕ್ಕೆ
ಡಿಸೆಂಬರ್ 26: ಬೆಂಗಳೂರು ಬುಲ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ : ರಾತ್ರಿ 8:30ಕ್ಕೆ
ಡಿಸೆಂಬರ್ 30: ಬೆಂಗಳೂರು ಬುಲ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್: ರಾತ್ರಿ 8:30ಕ್ಕೆ
ಜನವರಿ 1: ಬೆಂಗಳೂರು ಬುಲ್ಸ್ ವಿರುದ್ಧ ತೆಲುಗು ಟೈಟಾನ್ಸ್, : ರಾತ್ರಿ 8:30ಕ್ಕೆ
ಜನವರಿ 2: ಬೆಂಗಳೂರು ಬುಲ್ಸ್ ವಿರುದ್ಧ ಪುಣೇರಿ ಪಲ್ಟನ್ : ರಾತ್ರಿ 8:30ಕ್ಕೆ
ಜನವರಿ 6: ಬೆಂಗಳೂರು ಬುಲ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ : ರಾತ್ರಿ 8:30ಕ್ಕೆ
ಜನವರಿ 9: ಬೆಂಗಳೂರು ಬುಲ್ಸ್ ವಿರುದ್ಧ ಯುಪಿ ಯೋಧಾ : ರಾತ್ರಿ 8:30ಕ್ಕೆ
ಜನವರಿ 12: ಬೆಂಗಳೂರು ಬುಲ್ಸ್ ವಿರುದ್ಧ ದಬಾಂಗ್ ದೆಹಲಿ KC : ರಾತ್ರಿ 8:30ಕ್ಕೆ
ಜನವರಿ 14: ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್ : ರಾತ್ರಿ 8:30ಕ್ಕೆ








