Pro kabaddi 2022 : Bengaluru Bulls : ಬುಲ್ಸ್ ಟ್ರೋಫಿ ಕನಸು ಭಗ್ನ – ಸೆಮಿಫೈನಲ್ಸ್ ನಲ್ಲಿ ಸೋತ ಗೂಳಿಗಳು
ಪ್ರೋ ಕಬಡ್ಡಿ ಸೀಸನ್ 8 ರ ಆರಂಭದಿಂದಲೂ ಅಬ್ಬರದ ಆಟವಾಡುತ್ತಲೇ ಸೆಮಿ ಫೈನಲ್ಸ್ ಪ್ರವೇಶಿಸಿದ್ದ ಬೆಂಗಳೂರಿನ ಗೂಳಿಗಳು ಫೈನಲ್ ಪ್ರವೇಶಿಸಲಾಗದೇ ನಿರಾಸೆ ಅನುಭವಿಸಿದ್ದಾರೆ. ಸೆಮಿಫೈನಲ್ ನಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಬೆಂಗಳೂರು ಬುಲ್ಸ್ 35 – 40 ಅಂತರಿದಿಂದ ಸೋತಿದ್ದು , ಫೈನಲ್ಸ್ ಕನಸು ಭಗ್ನವಾಗಿದೆ.. ಬುಲ್ಸ್ ಅಭಿಮಾನಿಗಳೂ ಕೂಡ ಬೇಸರರಾಗಿದ್ದಾರೆ..
ಬುಧವಾರ ನಡೆದ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಬುಲ್ಸ್ – ದೆಹಲಿ ವಿರುದ್ಧ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಬುಲ್ಸ್ ತಂಡದಲ್ಲಿನ ರಕ್ಷಣಾ ವಿಭಾಗದಲ್ಲಿ ಆದ ಕೊಂಚ ಲೋಪದಿಂದಾಗಿ ತಂಡ 5 ಅಂಕಗಳ ಅಂತರದಲ್ಲಿ ಸೋಲು ಕಂಡಿದೆ.
ಬುಲ್ಸ್ ತಂಡದ ರಕ್ಷಣಾ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಮೊದಲಾವಧಿಯಲ್ಲಿ ಒಂದು ಅಂಕದ ಮುನ್ನಡೆ ಸಾಧಿಸಿದರೂ, ಎರಡನೇ ಅವಧಿಯಲ್ಲಿ ಅಷ್ಟೊಳ್ಳೆ ಪ್ರದರ್ಶನ ಬುಲ್ಸ್ ತಂಡದಿಂದ ಅದ್ರಲ್ಲೂ ಡಿಫೆನ್ಸ್ ವಿಭಾಗದಿಂದ ಬರಲಿಲ್ಲ. ಹೀಗಾಗಿ ಟ್ರೋಫಿ ಗೆಲ್ಲಲು ಇನ್ನೊಂದು ಹಂತವಷ್ಟೇ ಬಾಕಿಯಿದ್ದಾಗಲೇ ಸೋಲುಂಡು ಲೀಗ್ ನಿಂದ ಹೊರನಡೆದಿದೆ.
ಗೂಳಿಗಳನ್ನ ಮಣಿಸಿ ಫೈನಲ್ ಟಿಕೆಟ್ ಪಡೆದಿರುವ ದಬಾಂಗ್ ಡೆಲ್ಲಿ ಟ್ರೋಫಿಗಾಗಿ ಪಾಟ್ನಾ ಪೈರೇಟ್ಸ್ ಜೊತೆಗೆ ಫೈನಲ್ಸ್ ನಲ್ಲಿ ಹೋರಾಟ ನಡೆಸಲಿದೆ.. ಪಟ್ನಾ ಪೈರೇಟ್ಸ್ ತಂಡದ ಜೊತೆಗೆ ಸೆಣಸಾಟ ಅಷ್ಟು ಸುಲಭವಲ್ಲ.. ಈ ಬಾರಿಯ ಲೀಗ್ ನ ಅತ್ಯಂತ ಬಲಶಾಲಿ ತಂಡವದು.. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿಯೇ ಇದ್ದ ಪಟ್ನಾ ಮೂರು ಸೀಸನ್ ಗಳಲ್ಲಿ ಟ್ರೋಫಿ ತನ್ನದಾಗಿಸಿಕೊಂಡಿದೆ… ಇದೀಗ 4ನೇ ಬಾರಿಗೆ ಟ್ರೋಫಿ ಗೆಲ್ಲುವ ಹಪಾಹಪಿಯಲ್ಲಿದೆ…