ಬ್ಲ್ಯಾಕ್ ಪಲ್ಸರ್ ಚೈನ್ ಸ್ನಾಚರ್ಸ್ ಟೀಮ್ ಬಂಧನ
ಜ್ನಾನ ಭಾರತಿ ಪೊಲೀಸರಿಂದ ಕಳ್ಳರ ಬಂಧನ
ಬೈಕ್ ನಲ್ಲಿ ಬಂದು ಹಿಂಬದಿಯಿಂದ ಸರ ಕಿತ್ತು ಪರಾರಿಯಾಗ್ತಿದ್ದ ಖದೀಮರು
ಬ್ಲ್ಯಾಕ್ ಪಲ್ಸರ್ ಚೈನ್ ಸ್ನಾಚರ್ಸ್ ಟೀಮ್ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು , ಕುಖ್ಯಾತ ಸರಗಳ್ಳರನ್ನ ಜ್ನಾನ ಭಾರತಿ ಪೊಲೀಸರು ಬಂಧಿಸಿದ್ದಾರೆ..
ರಸ್ತೆಯಲ್ಲಿ ಒಬ್ಬಂಟಿಯಾಗಿ ಸಂಚರಿಸುವವರನ್ನೇ ಈ ಖದೀಮರು ಟಾರ್ಗೆಟ್ ಮಾಡ್ತಿದ್ದರು. ಬೈಕ್ ನಲ್ಲಿ ಬಂದು ಹಿಂಬದಿಯಿಂದ ಸರ ಕಿತ್ತು ಪರಾರಿಯಾಗ್ತಿದ್ದರು.. ಇವರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಂಧಿತರಿಂದ ಸುಮಾರು 8 ಲಕ್ಷ ಮೌಲ್ಯದ ಚಿನ್ನಾಭರಣ 2 ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಮಣಿಕಂಠ ,ಗುರು ಹಾಗು ಪುನೀತ್ ಬಂಧಿತ ಆರೋಪಿಗಳಾಗಿದ್ದಾರೆ. ಹಲವು ಠಾಣೆಗಳಿಗೆ ಬೇಕಾಗಿರುವ ಪ್ರಮುಖ ಆರೋಪಿಗಳಾಗಿದ್ದಾರೆ.









