ಸಿಲಿಕಾನ್ ಸಿಟಿಗೆ ಎದುರಾಗಬಹುದಾ ಮತ್ತೊಂದು ಮಹಾ ಕಂಟಕ..!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೆ ಕೊರೊನಾ ಆತಂಕ ಹೆಚ್ಚಾಗ್ತಿರುವ ಬೆನ್ನಲ್ಲೇ ಇದೀಗ ಜನರಿಗೆ ಆಘಾತಕಾರಿ ವಿಚಾರವೊಂದು ಬಹಿರಂಗವಾಗಿದೆ. ಅದೇನೆಂದ್ರೆ ಬ್ರಿಟನ್ ನ ಹೊಸ ರೂಪಾಂತರಿ ವೈರಸ್ ಬೆನ್ನಲ್ಲೇ ಈಗ ಬ್ರಿಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನೂತನ ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಬೆಂಗಳೂರಿಗೂ ಕಾಲಿಡುವ ಭೀತಿ ಎದುರಾಗಿದೆ. ಹೀಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಾಗಿದೆ.
ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಪ್ರಯಾಣದ ಹಿನ್ನೆಲೆ ಇರುವವರಿಗೆಲ್ಲಾ RTPCR ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಅವ್ರ ಬಳಿ ನೆಗೆಟಿವ್ ರಿಪೋರ್ಟ್ ಇದ್ರೂ ಇಲ್ಲಿಗೆ ಬಂದ ನಂತ್ರ ಕಡ್ಡಯಾವಾಗಿ RTPCR ಪರೀಕ್ಷೆ ಮಾಡಿಸಲೇಬೇಕು. ಪಾಸಿಟಿವ್ ಬಂದವ್ರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಎಲ್ಲಾ ಪಾಸಿಟಿವ್ ಸ್ಯಾಂಪಲ್ ಗಳನ್ನ ನಿಮ್ಹಾನ್ಸ್‌ಗೆ ಜೆನೆಟಿಕ್ ಪರೀಕ್ಷೆಗೆ ರವಾನೆ ಮಾಡಲಾಗುತ್ತೆ. ನೆಗೆಟಿವ್ ಬಂದವರು 14 ದಿನ ಹೋಮ್ ಕ್ವಾರಂಟೈನ್ ಆಗಲೇಬೇಕು. ಅವ್ರಿಗೂ 7ನೇ ದಿನ ಮತ್ತೊಮ್ಮೆ RTPCR ಪರೀಕ್ಷೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದಲ್ಲದೇ ಕೇರಳದಲ್ಲಿಯೂ ಕೊರೊನಾ ಹಾವಳಿ ಮತ್ತೆ ಹೆಚ್ಚಾಗ್ತಿರುವ ಹಿನ್ನೆಲೆ ಅಲ್ಲಿಂದ ಬಂದವರಿಗೂ ಏರ್ಪೋರ್ಟ್ ನಲ್ಲಿ ಕೊರೊನಾ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಪಾಸಿಟಿವ್ ಕಂಡು ಬಂದ್ರೆ ಅವರ ಸ್ಯಾಂಪಲ್ ಜಿನೋಮ್ ಸೀಕ್ವೆನ್ಸಿಂಗ್‌ಗೆ ಒಳಪಡಿಸಲಾಗುತ್ತೆ. ಕೇರಳದಿಂದ ಬರುವವರು ಶಿಕ್ಷಣಕ್ಕಾಗಿ, ಪ್ರವಾಸಕ್ಕಾಗಿ, ರೆಸಾರ್ಟ್‌ಗಳಲ್ಲಿ ಉಳಿದುಕೊಳ್ಳುವವರಾಗಲಿ RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಅದು ಕೂಡ 72 ಗಂಟೆಯೊಳಗೆ ಟೆಸ್ಟ್ ಮಾಡಿಸಿರೋ ರಿಪೋರ್ಟ್ ಇರಬೇಕು.
ಉತ್ತರಾಖಂಡದಲ್ಲಿ ಹಿಮಕುಸಿತ – ಸಾವಿನ ಸಂಖ್ಯೆ 58ಕ್ಕೆ ಏರಿಕೆ..!
ಮಧ್ಯಪ್ರದೇಶದಲ್ಲಿ ಕಾಲುವೆಗೆ ಬಸ್ ಉರುಳಿದ ದುರಂತ : 49 ಮಂದಿ ಬಲಿ
ಜಪಾನ್ ನಲ್ಲಿ ಯಾರೂ ಸಹ ಓವರ್ ವೇಯಿಟ್ ಇಲ್ಲ – ಇದರ ಹಿಂದಿನ ಸೀಕ್ರೇಟ್ ಏನು…! Intresting facts