Bengaluru : ಉದ್ದೇಶಪೂರ್ವಕವಾಗಿ ನಾಯಿ ಮೇಲೆ ಕಾರು ಹತ್ತಿಸಿದ ದುಷ್ಕರ್ಮಿ…
ಬೆಂಗಳೂರಿನಲ್ಲಿ ದಿನೇ ದಿನೇ ಮಾನವೀಯತೆ ಮರೆಯಾಗುತ್ತಿದೆಯಾ ಎನ್ನಿಸುವಂತಹ ಘಟನೆಗಳು ಪದೇ ಪದೇ ವರದಿಯಾಗುತ್ತಿದೆ. ಬೆಂಗಳೂರಿನ ಮೂಕ ಪ್ರಾಣಿಗಳು , ಬೀದಿ ನಾಯಿ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ ಮಾಡುತ್ತಿರುವ ಘಟನೆಗಳು ನಡೆಯುತ್ತಿದೆ.
ಬೆಂಗಳೂರಿನ ಮುತ್ತುರಾಯ ನಗರದ ಸಪ್ತಗಿರಿ ಲೇಔಟ್ ನಲ್ಲಿ ಕಾರು ಚಾಲಕನೊಬ್ಬ ಮಲಗಿದ್ದ ನಾಯಿಯ ಮೇಲೆ ಬೇಕಂತಲೇ ಕಾರು ಹತ್ತಿಸಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಿರ್ದಯಿ ಕಾರು ಚಾಲಕ ಉದ್ದೇಶಪೂರ್ವಕವಾಗಿ ನಾಯಿ ಮೇಲೆ ಕಾರು ಚಲಾಯಿಸಿದ್ದಾನೆ. ಕಾರು ಬರುವುದು ಅರಿವಿಗೆ ಬರ್ತಿದ್ದಂತೆ ನಾಯಿ ಜಾಗ ಬಿಡಲು ಮುಂದಾಗುವಷ್ಟರಲ್ಲೇ ದುಷ್ಕರ್ಮಿ ಕಾರು ಹರಿಸಿದ್ದಾನೆ. ನಾಯಿ ಕಾಣುತ್ತಿದ್ದಂತೆ ಕಾರಿನ ವೇಗ ಹೆಚ್ಚಿಸಿದ್ದಾನೆ.
ಜನವರಿ 7 ರಂದು ಬೆಳಗ್ಗೆ 11.10ರ ವೇಳೆಗೆ ಘಟನೆ ನಡೆದಿದ್ದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲು ಮಾಡಲಾಗಿದೆ. KA 05 MP 5836 ಸಂಖ್ಯೆಯ ಮಾರುತು ಸ್ವಿಫ್ಟ್ ಕಾರು ಬಳಸಿ ಕೃತ್ಯ ಎಸಗಲಾಗಿದೆ.
Bengaluru: Criminal who deliberately drove a car over a dog…








