Bengaluru Traffic: ರೋಗಿಯ ಜೀವ ಉಳಿಸಲು 3 KM ಓಡಿದ ಡಾಕ್ಟರ್….
ಬೆಂಗಳೂರು ಟ್ರಾಫಿಕ್ ನಲ್ಲಿ ಸಿಲುಕಿದ್ದ ವೈದ್ಯರೊಬ್ಬರು ರೋಗಿಯ ಜೀವ ಉಳಸಿಲು 3 ಕಿಲೋ ಮೀಟರ್ ಓಡಿ ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಟ್ರಾಫಿಕ್ ಕಿರಿಕಿರಿಯ ಬಗ್ಗೆ ನಿಮಗೆಲ್ಲ ಗೊತ್ತಿರುವಂತದ್ದೆ , ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕರಾಗಿರುವ ಡಾ.ಗೋವಿಂದ್ ನಂದಕುಮಾರ್ ಅವರು ತುರ್ತು ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಲು ಬೆಂಗಳೂರಿನ ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗೆ ತೆರಳುತ್ತಿದ್ದರು. ಅಷ್ಟರಲ್ಲೇ ಅವರ ಕಾರು ಟ್ರಾಫಿಕ್ ಜಾಮ್ ಗೆ ಸಿಲುಕಿತ್ತು. ಇದರಿಂದ ಶಸ್ತ್ರ ಚಿಕಿತ್ಸೆಗೆ ತಡವಾಗುತ್ತಿತ್ತು.
ಸುಮಾರು ಹೊತ್ತಾದರೂ ಟ್ರಾಫಿಕ್ ತೆರವಾಗದ ಕಾರಣ ಪರಿಸ್ಥಿತಿಯ ಗಂಭೀರತೆ ಅರಿತ ಡಾಕ್ಟರ್ ಗೋವಿಂದ್ ನಂದಕುಮಾರ್ ಕೂಡಲೇ ಕಾರಿನಿಂದ ಇಳಿದು ಆಪರೆಷನ್ ಥಿಯೇಟರ್ ಗೆ ಧಾವಿಸಿದ್ದಾರೆ.
.@SoumiEmd @CCellini @andersoncooper @WCMSurgery @nycHealthy @NYCRUNS https://t.co/54zt4H5SxY #runtowork @ManipalHealth #togetherstronger pic.twitter.com/21NYbZgraX
— Govind Nandakumar MD (@docgovind) September 12, 2022
ಈ ಕುರಿತು ಮಾತನಾಡಿರುವ ಡಾಕ್ಟರ್ “ನಾನು ಪ್ರತಿ ದಿನ ಬೆಂಗಳೂರಿನ ಮಧ್ಯಭಾಗದಿಂದ ಬೆಂಗಳೂರಿನ ಆಗ್ನೇಯ ಭಾಗದಲ್ಲಿರುವ ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗಳಿಗೆ ಪ್ರಯಾಣಿಸುತ್ತೇನೆ. ಸಮುಯಕ್ಕೆ ಸರಿಯಾಗಿ ಮನೆಯಿಂದ ಹೊರಟಿದ್ದೆ ನನ್ನ ತಂಡ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡಿತ್ತು. ಭಾರಿ ಟ್ರಾಫಿಕ್ ನಿಂದಾಗಿ ಡ್ರೈವರ್ ಗೆ ಹೇಳಿ ಮರು ಯೋಚಿಸದೇ ಆಸ್ಪತ್ರೆ ಕಡೆ ಓಡಿದೆ ಎಂದು ಹೇಳಿದ್ದಾರೆ. ನಾನು ನಿಯಮಿತವಾಗಿ ಜಿಮ್ ಮಾಡಿದ್ದರಿಂದ ನನಗೆ ಓಡುವುದು ಸುಲಭವಾಯಿತು ಎಂದು ಹೇಳಿದ್ದಾರೆ.








