ಬೆಂಗಳೂರು: ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗರುಡಾ ಮಾಲ್ ಗೆ 20,000 ರೂಪಾಯಿ ದಂಡ ವಿಧಿಸಲಾಗಿದೆ. ತನ್ನ ಆವರಣದಲ್ಲಿ ಕೋವಿಡ್ ನ ಮುಚ್ಚೆಚ್ಚರಿಕಾ ಕ್ರಮಗಳನ್ನ ಸೂಕ್ತವಾಗಿ ಪಾಲಿಸದೇ , ಸರಿಯಾದ ಕ್ರಮಗಳನ್ನ ತೆಗೆದುಕೊಳ್ಳದ ಕಾರಣ, ಬೆಂಗಳೂರಿನ ಗರುಡಾ ಮಾಲ್‌ಗೆ ಬಿಬಿಎಂಪಿ 20,000 ರೂಪಾಯಿ ದಂಡ ವಿಧಿಸಿದೆ.
ತನ್ನ ಆವರಣದಲ್ಲಿ ಕೋವಿಡ್ -19 ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳದ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 20,000 ರೂಪಾಯಿ ದಂಡ ವಿಧಿಸಿದೆ. ಅಲ್ಲದೇ ಜನರನ್ನ ಮಾಲ್ ನ ಒಳಗೆ ಬಿಡುವಾಗ ಡಬಲ್ ಡೋಸ್ ಲಸಿಕೆ ಪ್ರಮಾಣಪತ್ರಗಳನ್ನು ಪರಿಶೀಲಿಸದಿರುವುದು ಕಂಡುಬಂದಿದೆ. ಇದಲ್ಲದೆ, ಸಾಮಾಜಿಕ ಅಂತರದ ಮಾನದಂಡಗಳನ್ನು ಸಹ ಅನುಸರಿಸಲಾಗುತ್ತಿಲ್ಲ ಮತ್ತು ಕೆಲವು ಜನರು ಮಾಸ್ಕ್ ಧರಿಸುತ್ತಿಲ್ಲ ಎನ್ನಲಾಗಿದೆ..
ಓಮಿಕ್ರಾನ್ ಪ್ರಕರಣಗಳ ಹೆಚ್ಚಳದ ಮಧ್ಯೆ, ಕರ್ನಾಟಕ ಸರ್ಕಾರವು ಮಾಲ್‌ಗಳು ಮತ್ತು ಥಿಯೇಟರ್‌ಗಳಿಗೆ ಪ್ರವೇಶಿಸುವ ಎಲ್ಲರಿಗೂ ಸಂಪೂರ್ಣ ಲಸಿಕೆ ಹಾಕುವುದನ್ನು ಕಡ್ಡಾಯಗೊಳಿಸಿದೆ. ಮಾಲ್‌ಗಳು ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪರಿಶೀಲಿಸದಿರುವುದು ಕಂಡುಬಂದರೆ ಮತ್ತು ಸರಿಯಾದ ಪ್ರೋಟೋಕಾಲ್ ಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳದೇ ಇರುವುದು ಕಂಡುಬಂದರೆ ಭವಿಷ್ಯದಲ್ಲಿ ಹೆಚ್ಚಿನ ದಂಡವನ್ನು ನೀಡಲು ನಾವು ಯೋಜಿಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಡಾ ಬಾಲಸುಂದರ್ ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 289 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 172 ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ.
ರಾಜ್ಯದ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಸುಮಾರು ನಾಲ್ಕು ಸಾವುಗಳು ದಾಖಲಾಗಿವೆ.