Bengaluru : ತಂದೆಯ ತಿಥಿ ಕಾರ್ಯದ ದಿನವೇ ಮಗಳ ದಾರುಣ ಸಾವು
ಬೆಂಗಳೂರು : ತಂದೆಯ ತಿಥಿ ಕಾರ್ಯದ ದಿನವೇ ಗ್ಯಾಸ್ ಬ್ಲಾಸ್ಟ್ ಆಗಿ ಮಗಳು ದಾರಣವಾಗಿ ಸಾವನಪ್ಪಿರುವ ಘಟನೆಯು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..
ತಿಥಿ ಕಾರ್ಯಕ್ಕೆಂದು ಅಡುಗೆ ಮಾಡುವಾಗ ಗ್ಯಾಸ್ ಸೋರಿಕೆಯಾಗಿ ಅನಾಹುತ ಸಂಭವಿಸಿದೆ. ಕೆ ಎಸ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ.
ತಿಥಿ ಕಾರ್ಯಕ್ಕೆ ನಾನ್ ವೆಜ್ ಅಡುಗೆ ಮಾಡಲು ಸಿಲಿಂಡರ್ ಕುಟುಂಬಸ್ಥರು ತರಿಸಿದ್ದರು.. ಮನೆ ಚಿಕ್ಕದಾಗಿದ್ದು ಕೋಣೆಯಲ್ಲೇ ಸ್ಟೌವ್ ಇಟ್ಟು ಅಡುಗೆ ಮಾಡಲು ತಯಾರಿ ಮಾಡಿಕೊಂಡಿದ್ದಾಗ ಈ ಅನಾಹುತ ಸಂಭವಿಸಿದೆ..
ಗ್ಯಾಸ್ ಸೋರಿಕೆಯಾಗಿ ಸ್ಟೌವ್ ಬೆಂಕಿಯ ತೀವ್ರತೆಗೆ ಗ್ಯಾಸ್ ಫ್ಲೇಮ್ ದೊಡ್ಡದಾಗಿ ಹೊತ್ತಿಕೊಂಡಿದೆ.. ಪರಿಣಾಮ ಅಡುಗೆ ಮಾಡ್ತಿದ್ದ ಮಹಿಳೆ (42) ಪರಮೇಶ್ವರಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಉಳಿದ ಆರು ಮಂದಿಗೆ ಗಾಯಗಳಾಗಿದ್ದು, ವಿಕ್ಟೋರಿಯಾ ಬರ್ನಿಂಗ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








