BBMPಯ ನಿರ್ಲಕ್ಷ್ಯದಿಂದ ಬೆಂಗಳೂರು ದ್ವೀಪವಾಗಿ ಮಾರ್ಪಟ್ಟಿದೆ
ಬೆಂಗಳೂರು : ಲಂಗು ಲಗಾಮಿಲ್ಲದೇ ಸುರಿಯುತ್ತಿರುವ ಮಳೆಗೆ ರಾಜ್ಯ ರಾಜಧಾನಿ ಬೆಂಗಳೂರು ಅಸ್ತವ್ಯಸ್ತಗೊಂಡಿದೆ.
ಸಾಕಷ್ಟು ಬಡಾವಣಿಗಳು ಕೆರೆಗಳಂತಾಗಿವೆ. ಈ ನಡುವೆ ಪ್ರವಾಹಕ್ಕೆ ತುತ್ತಾಗಿರುವ ರೇನ್ ಬೋ ಡ್ರೈವ್ ಲೇಔಟ್, ಮಾರಥ್ ಹಳ್ಳಿ, ಸರ್ಜಾಪುರ, ಯಮಲೂರು ಲೇಔಟ್ ಗಳಲ್ಲಿ ತುಂಬಿಕೊಂಡಿರುವ ನೀರು ಹಾಗೆಯೇ ಇದೆ.
ಹೀಗಾಗಿ ನಿವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯದಲ್ಲಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ಸಹಜಸ್ಥಿತಿಗೆ ಬರುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ.
BBMPಯ ನಿರ್ಲಕ್ಷ್ಯದಿಂದ ಬೆಂಗಳೂರು ದ್ವೀಪವಾಗಿ ಮಾರ್ಪಟ್ಟಿದೆ.
ಮಳೆ ಕಡಿಮೆಯಾದರೂ ನೆರೆಇನ್ನೂ ಹಾಗೆಯೇ ಇದೆ. ತ್ವರಿತ ಗತಿಯ ಪರಿಹಾರ ಕಾರ್ಯಾಚರಣೆ ಕೈಗೊಳ್ಳದ ಬಸವರಾಜ ಬೊಮ್ಮಾಯಿ ಅವರ ಬೇಜವಾಬ್ದಾರಿ ಸರ್ಕಾರವೇ ಈ ಅನಾಹುತಗಳಿಗೆ ನೇರ ಹೊಣೆ ಎಂದು ಆರೋಪಿಸಿದ್ದಾರೆ.