ಕೇಂದ್ರದ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆಪ್ಟೆಂಬರ್ 28ಕ್ಕೆ ಕರ್ನಾಟಕ ಬಂದ್ ಗೆ ರೈತರು ಕರೆ ನೀಡಿದ್ದಾರೆ.
ಇನ್ನೂ ರೈತರು ನಾಳೆ ಬೆಂಗಳೂರು ಹೆದ್ದಾರಿಗಳನ್ನು ಬಂದ್ ಮಾಡಿ ಆಕ್ರೋಶ ಹೊರಹಾಕಲಿದ್ದಾರೆ.
5 ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಲಿವೆ.
ಹೀಗಾಗಿಯೇ ಬೆಂಗಳೂರಿನಿಂದ ದೂರದೂರುಗಳಿಗೆ ತೆರಳುವ ಹಾಗೂ ಬೆಂಗಳೂರಿಗೆ ಬರುವವರು ಎಚ್ಚರ ವಹಿಸಬೇಕಿದೆ.
ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲ ಹೆದ್ದಾರಿಗಳನ್ನೂ ನಾಳೆ ರೈತ ಸಂಘಟನೆಗಳು ಬಂದ್ ಮಾಡಿ, ಜೈಲ್ ಭರೋ ಹೋರಾಟವನ್ನೂ ಮಾಡಲಿದ್ದಾರೆ.
ಬುಧವಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಧಿವೇಶನದಲ್ಲಿ ಎಪಿಎಂಸಿ ಮಸೂದೆ ಮಂಡಿಸಿದ್ದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗಾಗಿಯೇ ಸರ್ಕಾರದ ನಡೆ ವಿರುದ್ಧ ಸಿಡಿದೆದ್ದ ರೈತ ಸಂಘಟನೆಗಳು ಈಗಾಗಲೇ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿಯನ್ನೂ ನಡೆಸುತ್ತಿವೆ.