Bengaluru : ಶಾಲೆಗಳಿಗೆ ರಜೆ ಮುಂದುವರೆಸುವ ವಿಚಾರದ ಬಗ್ಗೆ ಸಿಎಂ ಜೊತೆಗೆ ಚರ್ಚೆ : ಆರಗ ಜ್ಞಾನೇಂದ್ರ
ಇಂದು ಬಿಜೆಪಿ ಕಚೇರಿಗೆ ಬಂದಿದೆ ಇದು ಮಾಮೂಲಿ ಭೇಟಿ. ಪ್ರತಿವಾರ ಸಚಿವರು ಬರಬೇಕ ಅದೇ ರೀತಿ ಬಂದಿರುವೆ, ಬಿಜೆಪಿ ಕಚೇರಿಗೆ ಬರುವ ಕಾರ್ಯಕರ್ತರ ಸಮಸ್ಯೆ ಬಗೆಹರಿಸಲು ಕೆಲಸ ಮಾಡ್ತಿವಿ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ..
ಹಿಜಬ್ ವಿಚಾರವಾಗಿ ಕೋರ್ಟ್ ತೀರ್ಮಾನ ನೀಡಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.. ಶಾಲೆಗಳಿಗೆ ರಜೆ ಮುಂದುವರೆಸುವ ವಿಚಾರದ ಬಗ್ಗೆ ಸಿಎಂ ಬೊಮ್ಮಯಿ ನೇತೃತ್ವದಲ್ಲಿ ಸಭೆ ಮಾಡಿ ಚರ್ಚೆ ಮಾಡಬೇಕಿದೆ..
ನಾನು ,ಶಿಕ್ಷಣ ಸಚಿವರು , ಸಿಎಂ ಎಲ್ಲಾ ಸೇರಿ ತೀರ್ಮಾನ ಮಾಡ್ತಿವಿ. ನಂತ್ರ ಶಾಲಾ ಕಾಲೇಜುಗಳಲ್ಲಿ ರಜೆ ಮುಂದುವರೆಸುವ ಬಗ್ಗೆ ತೀರ್ಮಾನ ಮಾಡ್ತಿವಿ ಎಂದಿದ್ದಾರೆ..








