ಪತ್ನಿ ಕಿರುಕುಳಕ್ಕೆ ಬೇಸತ್ತು ಮದುವೆಯಾದ ಮೂರೇ ತಿಂಗಳಿಗೆ ಪತಿ ಆತ್ಮಹತ್ಯೆ..
ಮದುವೆಯಾದ ಮೂರೇ ತಿಂಗಳಿಗೆ ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಂವಿ ಲೇಔಟ್ ಉಲ್ಲಾಳ ಬಳಿ ನಿವಾಸಿಯಾಗಿರುವ 24 ವರ್ಷದ ಮಹೇಶ್ವರ ಎಂಬ ವ್ಯಕ್ತಿ ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಆಗಸ್ಟ್ 21 ರಂದು ಕವನ (22) ಎಂಬ ಯುವತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ನಾಲ್ಕು ತಿಂಗಳು ಪೂರೈಸುವ ಮೊದಲೆ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. 5 ದಿನ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಹೇಶ್ವರನ ತಾಯಿ ರತ್ನಮ್ಮ ನೀಡಿದ ದೂರಿನ ಆಧಾರದಲ್ಲಿ ಜ್ಞಾನಭಾರತಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 34, ಮತ್ತು 306(ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪತ್ನಿ ಕವನ ಮತ್ತು ಆಕೆಯ ಪೋಷಕರಾದ ಆತ್ಮಾನಂದ ಮತ್ತು ಪದ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.
ವಿವಾಹ ಮಾಡಿಕೊಂಡ ಕೆಲವೇ ದಿನಗಳಲ್ಲಿ ಕವನ ಪದೇ ಪದೇ ಜಗಳ ಮಾಡುತ್ತಿದ್ದಳು, ದುಬಾರಿ ಬೆಲೆಯ ವಸ್ತುಗಳು, ಆಭರಣ ನೀಡುವಂತೆ ಪೀಡಿಸುತ್ತಿದ್ದಳು. ಆಭರಣ ನೀಡದೇ ಇದ್ದಾಗ ಮಗನನ್ನು ಹೀಯಾಳಿಸುತ್ತಿದ್ದಳು ಅಷ್ಟೇ ಅಲ್ಲದೇ ಆಕೆಯ ತಂದೆಗೆ ಹಣ ನೀಡುವಂತೆ ಹಠ ಮಾಡುತ್ತಿದ್ದಳು. ಪ್ರತಿನಿತ್ಯ ಆಕೆಯ ಕಿರುಕುಳವನ್ನು ಸಹಿಸದೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಾಯಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ..
Bengaluru: husband commits suicide after three months of marriage.








