Bengaluru : ಯುವತಿಗೆ ಮೆಸೆಜ್ ಮಾಡಿದ್ದಕ್ಕೆ ಕೊಲೆ; ಮೃತದೇಹ ಚಾರ್ಮಡಿ ಘಾಟ್ ನಲ್ಲಿ ಎಸೆದ ಹಂತಕರು…
ಯುವತಿಗೆ ಮೆಸೆಜ್ ಮಾಡಿದ್ದಕ್ಕೆ ಬೆಂಗಳೂರಿನಲ್ಲಿ ಕೊಲೆ ಮಾಡಿ ಮೃತದೇಹವನ್ನ ಚಾರ್ಮಡಿ ಘಾಟ್ ನಲ್ಲಿ ಎಸೆದಿರುವ ಪ್ರಕರಣ ವರದಿಯಾಗಿದೆ. 19 ವರ್ಷದ ಗೋವಿಂದರಾಜು ಎಂಬ ಯುವಕನ ಮೃತದೇಹ ಚಾರ್ಮಡಿ ಘಾಟ್ ನಲ್ಲಿ ಪತ್ತೆಯಾಗಿದೆ.
ಬೆಂಗಳೂರು ಮತ್ತಿಕೆರೆ ನಿವಾಸಿಯಾಗಿದ್ದ ಗೋವಿಂದ ರಾಜುವನ್ನ ಕೊಲೆ ಮಾಡಿ ಚಾರ್ಮಡಿ ಘಾಟನೆ ನಲ್ಲಿ ಎಸೆಲಾಗಿದೆ ಎಂಬ ಮಾಹಿತಿ ಮೇರೆಗೆ ಯಶವಂತಪುರ ಪೊಲೀಸರು ಹುಡುಕಾಟ ನಡೆಸಿದ್ದರು.
ಮೃತ ಗೋವಿಂದ ರಾಜು ತನ್ನದೇ ಸಂಬಂಧಿ ಯುವತಿಯನ್ನ ಪ್ರೀತಿಸುತ್ತಿದ್ದನಂತೆ, ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಗೋವಿಂದರಾಜು ಯುವತಿಗೆ ಮೆಸೆಜ್ ಮಾಡಿದ್ದ ಇದನ್ನ ಗಮನಿಸಿದ ಯುವತಿ ಸಂಬಂಧಿಕರಾದ ಅನಿಲ್ ಕುಮಾರ್ ಮತ್ತು ಭರತ್ ಇನ್ನಿಬ್ಬರು ಸೇರಿಕೊಂಡು ಯುವಕನನ್ನ ಮಾತನಾಡುವುದಾಗಿ ಕರೆಸಿ ಕೊಲೆ ಮಾಡಿದ್ದಾರೆ. ನಂತರ ಆತನ ಮೃತದೇಹವನ್ನ ಚಾರ್ಮಡಿ ಘಾಟ್ ನಲ್ಲಿ ಎಸೆದಿದ್ದಾರೆ.
ಯುವತಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು ಅನಿಲ್ ಕುಮಾರ್ ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅನಿಲ್ ಕುಮಾರ್ ಕೊಲೆ ಮಾಡಿರುವ ಘಟನೆಯನ್ನ ಬಾಯ್ಬಿಟ್ಟಿದ್ದಾನೆ.
Bengaluru : Murdered for texting young woman; The killers dumped the dead body at Charmadi Ghat.








