Bengaluru – mysore expressway : ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ ಕೆ ಎಸ್ ಆರ್ ಟಿ ಸಿ….
ಬೆಂಗಳೂರು ಮಂಗಳೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆ ನಂತರ ಟೋಲ್ ಸಂಗ್ರಹ ಮಾಡಲು ಶುರು ಮಾಡಲಾಗಿದೆ. ಇದರ ನಡುವೆ ಕೆ ಎಸ್ ಆರ್ ಟಿ ಸಿ ಬೆಂಗಳೂರು ಮೈಸೂರು ಬಸ್ ಪ್ರಯಾಣದ ಟಿಕೆಟ್ ಶುಲ್ಕ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿದೆ.
ಟೋಲ್ ಸಂಗ್ರಹದ ಶುಲ್ಕದ ಹೊರೆಯನ್ನ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿರುವ ಕೆ ಎಸ್ ಆರ್ ಟಿ ಸಿ 15 ರಿಂದ 20 ರುಪಾಯಿಗಳಷ್ಟು ಟಿಕೆಟ್ ಬೆಲೆ ಹಚ್ಚಿಸಿದೆ. ಸಾಮಾನ್ಯ ಸಾರಿಗೆಗಳಿಗೆ 15 ರುಪಾಯಿ ರಾಜಹಂಸ ಬಸ್ ಗೆ 18 ರುಪಾಯಿ ಮತ್ತು ಮಲ್ಟಿ ಆಕ್ಸಲ್ ಬಸ್ ಗಳಿಗೆ 20 ರುಪಾಯಿ ದರವನ್ನ ಹೆಚ್ಚಿಸಲಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ಈ ಹಿಂದೆ ಸಾಮಾನ್ಯ ಸಾರಿಗೆ ಬಸ್ ನಲ್ಲಿ 150 ರುಪಾಯಿ ಇದ್ದ ದರ ಈಗ 165 ರುಪಾಯಿಗೆ ಹೆಚ್ಚಳವಾಗಿದೆ. ರಾಜಹಂಸದಲ್ಲಿ 180 ರುಪಾಯಿ ಇತ್ತು ಇದೀಗ 18 ರುಪಾಯಿ ಹೆಚ್ಚಳವಾಗಿ 198 ರುಪಾಯಿ ಆಗಿದೆ. ಮಲ್ಟಿ ಆಕ್ಸೆಲ್ ಬಸ್ ದರ 330 ರುಪಾಯಿ ಇದ್ದದ್ದು, 20 ರುಪಾಯಿ ಹೆಚ್ಚಳವಾಗಿ 350 ರುಪಾಯಿಗೆ ತಲುಪಿದೆ.
bengaluru-mysore-expressway-ksrtc-has-increased-the-bus-ticket-price