ಬೆಂಗಳೂರು ಮಂದಿಗೆ ಶಾಕಿಂಗ್ ನ್ಯೂಸ್ : ಒಂದು ವಾರಕ್ಕೆ ಮುಗಿಯಲ್ಲ ಲಾಕ್ ಡೌನ್..!
ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಹರಡುವಿಕೆಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಒಂದು ವಾರದ ಕಾಲ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದೆ. ಆದರೆ ಈ ಒಂದು ವಾರದ ಲಾಕ್ ಡೌನ್ ಅನ್ನು ವಿಸ್ತರಣೆ ಮಾಡುವ ಸಾಧ್ಯತೆಗಳಿವೆ.
ಹೌದು..! ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಪ್ರತಿದಿನ ನಗರದಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟುತ್ತಿದೆ. ಹೀಗಾಗಿ ಲಾಕ್ ಡೌನ್ ಮುಂದುವರಿಕೆಗೆ ಸಕಲ ಸಿದ್ದತೆಗಳನ್ನು ಬಿಬಿಎಂಪಿ ಮಾಡಿಕೊಂಡಿದೆ.
ಅಲ್ಲದೆ ಈಗಾಗಲೇ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ನಗರದಲ್ಲಿ ಆತಂಕರಿಕ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಲಾಕ್ ಡೌನ್ ಮುಂದುವರಿಸುವ ಅನಿವಾರ್ಯತೆ ಇದೆ ಎಂದು ಗೊತ್ತಾಗಿದ. ಹೀಗಾಗಿ ಸರ್ಕಾರದ ಮಟ್ಟದಲ್ಲೂ ಈಗಿರುವ ಲಾಕ್ ಡೌನ್ ಅನ್ನು ಮುಂದುವರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ನಗರದಲ್ಲಿ 7 ಸಾವಿರ ಕಂಟೈನ್ ಮೆಂಟ್ ಜೋನ್:
ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ 7 ಸಾವಿರಕ್ಕೂ ಹೆಚ್ಚು ಕಂಟೈನ್ ಮೆಂಟ್ ಜೋನ್ ಗಳನ್ನು ಸ್ಥಾಪಿಸಲಾಗಿದೆ. ದಕ್ಷಿಣ ವಲಯದಲ್ಲಿ 2045, ಪೂರ್ವ ವಲಯದಲ್ಲಿ 955, ಪಶ್ಚಿಮ ವಲಯದಲ್ಲಿ 762, ಬೊಮ್ಮನಹಳ್ಳಿಯಲ್ಲಿ 698, ಆರ್.ಆರ್.ನಗರದಲ್ಲಿ413, ಮಹದೇವಪುರದಲ್ಲಿ 378, ಯಲಹಂಕದಲ್ಲಿ 245, ದಾಸರಹಳ್ಳಿಯಲ್ಲಿ 102 ಕಂಟೈನ್ ಮೆಂಟ್ ಜೋನ್ ಗಳನ್ನು ಸ್ಥಾಪಿಸಲಾಗಿದೆ








