ನೆಲಮಂಗಲ: ಹಾಡುಹಗಲೇ ಚಿನ್ನದ ವ್ಯಾಪಾರಿಯನ್ನ ಅಡ್ಡಗಟ್ಟಿ ಕಾರು ಸಹಿತ ಹಣ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ನೆಲಮಂಗಲದ ಬಳಿ ನಡೆದಿದೆ..
ಇನೋವಾ ಕಾರಿನಲ್ಲಿ ಬಂದ 7-8 ಜನರು ಈ ಕೃತ್ಯವೆಸಗಿದ್ದಾರೆ. ಕಾರಿನಲ್ಲಿ 1 ಕೋಟಿವರೆಗೂ ಹಣವಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರಾಷ್ಟ್ರೀಯ ಹೆದ್ದಾರೆ 48 ತುಮಕೂರು ರಸ್ತೆ ಮಾದಾವರ ಬಳಿ ಈ ಘಟನೆ ನಡೆದಿದೆ.. ಬೆಂ.ಉತ್ತರ ತಾಲ್ಲೂಕು ಮಾದಾವರದ ನಾಡ್ಗೀರ್ ಕಾಲೇಜು ಬಳಿ ನಡೆದಿದೆ.. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರ್ತಿದ್ದ ವೇಳೆ ರಾಬರಿ ನಡೆದಿದೆ..
ಬ್ರೀಜ಼ಾ ಕಾರಿನಲ್ಲಿದ್ದ ಉದ್ಯಮಿ ಯೋಗೇಶ್ ಸೇರಿದಂತೆ ಮೂವರನ್ನ ಹೆದರಿಸಿ ಕಾರಿನಿಂದ ಇಳಿಸಿ ಕಾರಿನ ಸಮೇತ ಎಸ್ಕೇಪ್ ಆಗಿದ್ದಾರೆ.. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ..








