Bengaluru : ತಲ್ವಾರ್ ಹಿಡಿದು ಲೂಟಿಗೆ ರಸ್ತೆಗಿಳಿದು ಪುಂಡಾಟ ನಡೆಸಿರುವ ಗೂಂಡಾಗಳು
ಗೂಂಡಾಗಳು ತಲ್ವಾರ್ ಹಿಡಿದು ಲೂಟಿಗೆ ರಸ್ತೆಗಿಳಿದು ಪುಂಡಾಟ ನಡೆಸಿರುವ ಘಟನೆ ಕೆಜಿಹಳ್ಳಿ 7ನೇ ಕ್ರಾಸ್ ನಲ್ಲಿ ನಡೆದಿದೆ.
ಹಣ ಕೊಡದಿದ್ದರೆ ಕೊಲ್ಲೋದಾಗಿ ಹತಾರಿ ಹಿಡಿದು ಬೀಸಲು ರೌಡಿಗಳು ಹೋಗಿದ್ದಾರೆ,,,
ಉದ್ದದ ಹತಾರಿ ಹಿಡಿದು ಅಂಗಡಿಯವನಿಗೆ ಹಲ್ಲೆಗೆ ಮುಂದಾಗಿದ್ದಾರೆ.. ಈ ಬಗ್ಗೆ ಸ್ಥಳೀಯರು ಟ್ವಿಟ್ಟರ್ ನಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ಅಂಗಡಿಯವನಿಗೆ ಬೆದರಿಸಿ ಮತ್ತೊಬ್ಬನನ್ನ ಅಟ್ಟಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ತನಿಖೆ ನಡೆಸಲು ಟ್ವೀಟ್ಟರ್ ನಲ್ಲೇ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕೆ.ಜಿ. ಹಳ್ಳಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..








